ನವದೆಹಲಿ:
ಮಾರಕ ಕೊರೋನಾ ವೈರಸ್ ಅಬ್ಬರ ದೇಶಾದ್ಯಂತ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 445 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ 445 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ 14,821 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ.
445 deaths and spike of 14,821 new #COVID19 positive cases reported in India in last 24 hrs.
Positive cases in India stand at 4,25,282 including 1,74,387 active cases, 2,37,196 cured/discharged/migrated & 13699 deaths: Ministry of Health pic.twitter.com/ucmSdlZRjI— ANI (@ANI) June 22, 2020
ಈ ಪೈಕಿ ಮಹಾರಾಷ್ಟ್ರದಲ್ಲಿ 3870, ದೆಹಲಿಯಲ್ಲಿ 3 ಸಾವಿರ, ತಮಿಳುನಾಡಿನಲ್ಲಿ 2532, ಗುಜರಾತ್ ನಲ್ಲಿ 580 ಮತ್ತು ಕರ್ನಾಟಕದಲ್ಲಿ 453 ಹೊಸ ಪ್ರಕರಣಗಳು ದಾಖಲಾಗಿವೆ.