2 ವಿಮಾನಗಳ ಡಿಕ್ಕಿ, ಸಂಸದ ಸೇರಿ 7 ಮಂದಿ ದುರ್ಮರಣ!

ಅಲಾಸ್ಕ:

     ಎರಡು ವಿಮಾನಗಳ ಮಧ್ಯೆ ಪರಸ್ಪರ ಡಿಕ್ಕಿ ಉಂಟಾಗಿ ಶಾಸಕ ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಅಲಾಸ್ಕದಲ್ಲಿ ಶುಕ್ರವಾರ ನಡೆದಿದೆ.

      ವಿಮಾನದಲ್ಲಿ 4 ಪ್ರವಾಸಿಗರು, ಓರ್ವ ಗೈಡ್​ ಹಾಗೂ ಪೈಲಟ್​ ಇದ್ದರು. ಇವರು ದಕ್ಷಿಣ ಕರೋಲಿನಾದಿಂದ ವಿಮಾನದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರು. ಇನ್ನೊಂದು ವಿಮಾನದಲ್ಲಿ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಒಬ್ಬರೇ ಇದ್ದರು.  

      ಮೃತರನ್ನು ಪೈಲಟ್ ಗ್ರೆಗೊರಿ ಬೆಲ್, ಮಾರ್ಗದರ್ಶಿ ಡೇವಿಡ್ ರೋಜರ್ಸ್ ಮತ್ತು ದಕ್ಷಿಣ ಕೆರೊಲಿನಾ ಸಂದರ್ಶಕರಾದ ಕ್ಯಾಲೆಬ್ ಹಲ್ಸಿ, ಹೀದರ್ ಹಲ್ಸಿ, ಮ್ಯಾಕೆ ಹಲ್ಸಿ ಮತ್ತು ಕಸ್ರ‍್ಟಿನ್ ರೈಟ್ ಎಂದು ಗುರುತಿಸಲಾಗಿದೆ.

      ಕೆನೈ ಪರ್ಯಾಯ ದ್ವೀಪದ ಸಾಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಒಂದು ಲಘು ವಿಮಾನವನ್ನು ಚಾಲನೆ ಮಾಡುತ್ತಿದ್ದ ಸಾಲ್ಡೋಟ್ನಾ ನಗರದ ಸಂಸದ ಮತ್ತು ರಿಪಬ್ಲಿಕನ್ ಪಕ್ಷದ ಮುಖಂಡ ಗ್ಯಾರಿ ನೋಪ್ ಸಹ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ಧಾರೆ.

      ಇನ್ನು ಎರಡು ವಿಮಾನಗಳು ಅವಶೇಷ ಬಂದು ಕೆನಾಯ್ ಪೆನಿನ್ಸುಲಾದ ನಗರದ ಹೆದ್ದಾರಿಯಲ್ಲಿ ಬಿದ್ದವೆ. ಸದ್ಯ ಈ ಪ್ರಕರಣ ತನಿಖೆಗೆ ಆದೇಶಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap