ಕಂದಕಕ್ಕೆ ಉರುಳಿದ ಶಾಲಾ ಬಸ್ : 8 ವಿದ್ಯಾರ್ಥಿಗಳ ಸಾವು!!!

ಡೆಹ್ರಾಡೂನ್ : 

     ಉತ್ತರಾಖಂಡ ರಾಜ್ಯದ ತೆಹ್ರೀ ಗರ್ಹ್ವಾಲ್ ಎಂಬ ಗ್ರಾಮದ ಗ್ರಾಮದ ಬಳಿ ಮಂಗಳವಾರ ಶಾಲಾ ವ್ಯಾನ್ ಆಳವಾದ ಕಮರಿಗೆ ಬಿದ್ದು ಕನಿಷ್ಠ 8 ವಿದ್ಯಾರ್ಥಿಗಳು ಅಸುನೀಗಿದ್ದಾರೆ.

     ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಕಂದಕಕ್ಕೆ ಉರುಳಿತು ಎಂಬ ಮಾಹಿತಿ ಇದೀಗ ಲಭಿಸಿದೆ. ಈ ಶಾಲಾ ವಾಹನದಲ್ಲಿ ಸುಮಾರು 18 ಮಕ್ಕಳಿದ್ದರು ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

      ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆಯಲ್ಲಿ ಒಟ್ಟು 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಗರ್ವಾಲ್) ಅಜಯ್ ರೌತೆಲಾ ಖಚಿತಪಡಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap