ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಗಲ್ಲು ಶಿಕ್ಷೆ!!

ಲಾಹೋರ್ :

      ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರ್ರಫ್ ಅವರಿಗೆ ಅಲ್ಲಿನ ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

     ಪರ್ವೇಜ್ ಮುಷರಫ್ ವಿರುದ್ಧ 2013ರಲ್ಲಿ ಸಲ್ಲಿಕೆಯಾಗಿದ್ದ ದೇಶದ್ರೋಹ ಪ್ರಕರಣದ ತೀರ್ಪು ಇಂದು ವಿಶೇಷ ನ್ಯಾಯಮಂಡಳಿ ಪ್ರಕಟಿಸಿದ್ದು, ಈ ಪ್ರಕರಣ ಸಂಬಂಧ ಜ.ಪರ್ವೇಜ್ ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ.

      ಅಧ್ಯಕ್ಷರಾಗಿದ್ದ ಮುಷರಫ್‌, 2007ರ ನವೆಂಬರ್‌ 3ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ನಂತರ ಬಂದ ನವಾಜ್‌ ಷರೀಫ್‌ ನೇತೃತ್ವದ ಸರ್ಕಾರ, ಮುಷರಫ್‌ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ 2013ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2014ರ ಮಾರ್ಚ್‌ 31ರಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಈ ಸಂಬಂಧ ಇದೀಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರಫ್ ಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

     ಈ ಮೂಲಕ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ