ಕೊರಟಗೆರೆ :-
ಅಣ್ಣ ತಮ್ಮಂದಿರೊಂದಿಗೆ ಸ್ನೇಹಿತರು ಒಗ್ಗೂಡಿ ಈಜಲು ಹೋಗಿದ್ದ ಸಂದರ್ಭದಲ್ಲಿ ಯುವಕನೋರ್ವ ಈಜು ಬಾರದೆ ಮುಳುಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತಿಮ್ಮಸಂದ್ರ ಗೋಕುಲ್ ಕೆರೆ ಈಜಾಡುತ್ತಿರುವಾಗ ವಂಶೀಹಳ್ಳಿ (ವಮಚ್ಚೆಹಳ್ಳಿ) ಗ್ರಾಮದ ಹನುಮಂತ ರಾಯಪ್ಪ ಎಂಬುವರ ಮಗ ಹೇಮಂತ್ ಕುಮಾರ್ (20 ವರ್ಷ) ಎಂಬ ಯುವಕನೇ ಈಜಾಡುವಾಗ ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.
ಮೃತ ಹೇಮಂತ್ ಕುಮಾರ್ ದಾವಸ್ ಪೇಟೆ ಬಳಿಯ ನಿಡವಂದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೋಲಾರ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈತ ಫ್ಯಾಕ್ಟರಿಗೆ ಮಧ್ಯಾಹ್ನ 2 ಗಂಟೆಗೆ ಹೋಗಬೇಕಿದ್ದ ವ್ಯಕ್ತಿ ಈತನ ಅಣ್ಣನೊಂದಿಗೆ ಜೊತೆಗೆ ಸ್ನೇಹಿತರೊಂದಿಗೆ ತಿಮ್ಮಸಂದ್ರ ಗೋಕುಲ್ ಕೆರೆಯಲ್ಲಿ ಈಜಾಡಲು ಹೋಗಿ ನೀರಲ್ಲಿ ಮುಳುಗಿದ್ದಾನೆ ಎನ್ನ ಲಾಗಿದೆ.
ಮೃತ ಹೇಮಂತ್ ಕುಮಾರ್ ಕೆಲಸಕ್ಕೆ ಹೋಗುವ ಸಂದರ್ಭದಲ್ಲೂ ಸಾವು ನೀರಿನ ರೂಪದಲ್ಲಿ ಬರ ಸೆಳೆದು ಈತ ನನ್ನ ಸ್ನೇಹಿತರು ಹಾಗೂ ಆತರ ಅಣ್ಣ ನೊಂದಿಗೆ ಈಜಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ, ಮುಳುಗಿದ ಹೇಮಂತನನ್ನು ಹುಡುಕಲು ಪ್ರಯತ್ನಿಸಿದರಾದರೂ ಅದನ್ನ ಸುಳಿವು ಸಿಗದೇ ನಂತರ ಸಾರ್ವಜನಿಕರ ಸಹಕಾರದಲ್ಲಿ ಹೊರ ತೆಗೆದರಾದರೂ ಅಷ್ಟೊತ್ತಿಗೆ ಉಸಿರು ಕಟ್ಟಿ ಸಾವಿಗೀಡಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಸಿಪಿಐ ಅಭಿಷೇಕ್ ಮತ್ತು ಯೋಗೇಶ್ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
