ಶ್ರೀನಗರ:
ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಲೋನ್‌ನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಜೈಶ್ ಎ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಲೋನ್ ಮೂಲತಹ ಪಾಕಿಸ್ತಾನದವನಾಗಿದ್ದಾನೆ. ದೆಹಲಿ ಪೊಲೀಸ್ನ ವಿಶೇಷ ಘಟಕದ ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ.
A wanted terrorist of Jaish-e-Mohammad, Faiyaz Ahmed Lone, has been arrested from Srinagar, J&K by Special Cell, Delhi. He was carrying a reward of Rs 2 Lakh on his head,announced by Delhi police. Non-bailable warrant had been issued against him. He was evading arrest since 2015. pic.twitter.com/eADM1Pcn0m
— ANI (@ANI) April 1, 2019
ಈತನ ಸುಳಿವು ನೀಡಿ, ಬಂಧನಕ್ಕೆ ಸಹಕರಿಸುವವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 2015ರಲ್ಲೇ ಈತನ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಆದರೆ, ಅಂದಿನಿಂದಲೂ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ