ತೆಲಂಗಾಣ :
ಲಾಕ್ಡೌನ್ನಿಂದಾಗಿ ವಾಪಸ್ ಮನೆಗೆ ಬರಲಾಗದೇ ಒದ್ದಾಡುತ್ತಿದ್ದ ತನ್ನ ಮಗನನ್ನು ಮನೆಗೆ ಕರೆದುಕೊಂಡು ಬರಲು ತಾಯಿಯೊಬ್ಬಳು ಸುಮಾರು 1400 ಕಿ.ಮೀ ಬೈಕಿನಲ್ಲಿ ಪ್ರಯಾಣ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
50 ವರ್ಷದ ರಜಿಯಾ ಬೇಗಂ ಇಂತಹ ಸಾಸಹಕ್ಕೆ ಕೈ ಹಾಕಿ ತಮ್ಮ ಮಗನನ್ನು ಮನೆಗೆ ಕರೆತಂದಿರುವ ತಾಯಿ.
ಕೊರೊನಾ ವೈರಸ್ ಹರಡುವಿಕೆಯ ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಘೋಷಣೆ ಮಾಡಿದೆ. ಲಾಕ್‌ಡೌನ್ ಅನೌನ್ಸ್ ಆಗುವ ಹಿಂದಿನ ದಿನ ರಜಿಯಾರವರ ಮಗ ನಿಜಾಮುದ್ದೀನ್ ಆಂಧ್ರದ ನೆಲ್ಲೂರಿಗೆ ತೆರಳಿದ್ದ. ಆದ್ರೆ, ದಿಢೀರ್ ಲಾಕ್‌ಡೌನ್ ಅನೌನ್ಸ್ ಆದ ಪರಿಣಾಮ ತೆಲಂಗಾಣಕ್ಕೆ ಬರಲಾಗದೇ ಪರದಾಡುತ್ತಿದ್ದ. ಮಗನ ಈ ಸ್ಥಿತಿಯನ್ನು ನೋಡಲಾಗದೇ ರಜಿಯಾ ಹಗಲು ರಾತ್ರಿ ಎನ್ನದೇ ತಮ್ಮ ಸ್ಕೂಟಿಯಲ್ಲಿ ಒಂಟಿಯಾಗಿ ತೆರಳಿದ್ದಾರೆ. ಮಗನನ್ನು ವಾಪಸ್ ಕರೆತಂದಿದ್ದಾರೆ.
ಬೋದನ್ ನಗರದ ಎಸ್‌ಪಿ ಅವರ ಬಳಿ ಅನುಮತಿ ಪಡೆದುಕೊಂಡಿದ್ದ ರಜಿಯಾ, ತನ್ನ ಮಗನನ್ನು ಮನೆಗೆ ವಾಪಸ್ ಕರೆತರಲು ಸಾಧ್ಯವಾಯಿತು.ಹೋಗಿ ಬರುವ ವೇಳೆ ಹಲವು ಕಡೆ ಪೊಲೀಸರು ಅಡ್ಡ ಹಾಕಿದರು. ಆದರೆ, ನನ್ನ ಬಳಿ ಪಾಸ್ ಮತ್ತು ಪೊಲೀಸರ ಅನುಮತಿ ಪತ್ರ ಇದ್ದ ಕಾರಣ ಕಳುಹಿಸಿದರು ಎಂದು ರಜಿಯಾ ಹೇಳಿದ್ದಾರೆ.
ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದ ರಜಿಯಾ ಬೇಗಂ ನಿಜಾಮಾಬಾದ್‌ನ ಬೋದನ್ ಟೌನ್‌ನಿಂದ ಸೋಮವಾರ ಸ್ಕೂಟಿ ಬೈಕಿನಲ್ಲಿ ಪ್ರಯಾಣ ಆರಂಭಿಸಿದ್ದರು. ಮಂಗಳವಾರ ಬೆಳಿಗ್ಗೆ ನೆಲ್ಲೂರಿ ತಲುಪಿದ ರಜಿಯಾ, ಮತ್ತೆ ಬುಧವಾರ ಸಂಜೆ ನಿಜಾಮಾಬಾದ್‌ಗೆ ಮರುಳಿದರು. ಒಟ್ಟು 1400 ಕಿ.ಮೀ ಪ್ರಯಾಣ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
