ದೆಹಲಿ :
ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಜಾರಿ ಮಾಡಿರುವ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ)ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ.
ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಯ ಲಾಭ ಪಡೆಯಲು ಬಯಸುವ ಯಾವುದೇ ವ್ಯಕ್ತಿ ಅವರು 12-ಅಂಕಿಯ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ’ ಎಂದು ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಕಳಪೆ ಬಯೋಮೆಟ್ರಿಕ್ಸ್‌ನಿಂದಾಗಿ ಆಧಾರ್ ದೃಢೀಕರಣ ವಿಫಲವಾದರೆ, ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಅದರ ಅನುಷ್ಠಾನ ಸಂಸ್ಥೆಯ ಮೂಲಕ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಬಯೋಮೆಟ್ರಿಕ್ ಅಥವಾ ಆಧಾರ್ ಒನ್-ಟೈಮ್ ಪಾಸ್ವರ್ಡ್ ಅಥವಾ ಸಮಯ-ಆಧಾರಿತ ಒಟಿಪಿ ದೃಢೀಕರಣ ಸಾಧ್ಯವಾಗದಿದ್ದಲ್ಲಿ, ಭೌತಿಕ ಆಧಾರ್ ಪತ್ರದ ಆಧಾರದ ಮೇಲೆ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಹೊಂದಬಹುದು. ತ್ವರಿತ ಪ್ರತಿಕ್ರಿಯೆ (ಕ್ಯೂಆರ್) ಕೋಡ್ ಮೂಲಕ ದೃಢೀಕರಣ ಮಾಡಿಕೊಳ್ಳಬಹುದು. ಎಂದೂ ವಿವರಿಸಲಾಗಿದೆ.
ವಾರ್ಷಿಕವಾಗಿ ಶೇಕಡಾ 8 ರಷ್ಟು ಬಡ್ಡಿ ನೀಡಲಾಗುವ ಈ ಯೋಜನೆಯನ್ನು ಜೀವ ವಿಮಾ ನಿಗಮದ ಮೂಲಕ ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು 2017-18 ಮತ್ತು 2018-19ರ ಕೇಂದ್ರ ಬಜೆಟ್‌ಗಳಲ್ಲಿ ಘೋಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ