ವಿಪ್ರೋ ಸಿಇಒ ಸ್ಥಾನಕ್ಕೆ ನೀಮುಚ್ವಾಲಾ ರಾಜೀನಾಮೆ!!

ನವದೆಹಲಿ :

      ವಿಪ್ರೋ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ಕೌಟುಂಬಿಕ ಜವಾಬ್ದಾರಿಗಳ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

      ಈ ಕುರಿತು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜೀ ಮಾತನಾಡಿ,  ವಿಪ್ರೋಗೆ ಅಬಿದ್ ಅವರು ನೀಡಿದ ನಾಯಕತ್ವ ಮತ್ತು ಕೊಡುಗೆಗೆ ಧನ್ಯವಾದಗಳು. ಅನುಷ್ಠಾನದ ಬಲಿಷ್ಠ ಮನಸ್ಥಿತಿ ಬೆಳೆಯಲು ಕಳೆದ ನಾಲ್ಕು ವರ್ಷಗಳಿಂದ ಅಬಿದ್ ನೆರವು ನೀಡಿದ್ದರು. ನಮ್ಮ ಡಿಜಿಟಲ್ ವ್ಯವಹಾರ ಜಾಗತಿಕವಾಗಿ ಬೆಳೆಯಲು ಶ್ರಮಿಸಿದ್ದರು. ಅವರ ಭವಿಷ್ಯಕ್ಕೆ ನಾವು ಶುಭ ಹಾರೈಸುತ್ತೇವೆ. ಸುಗಮ ವ್ಯವಹಾರಕ್ಕಾಗಿ ಉತ್ತರಾಧಿಕಾರಿಯನ್ನು ನೇಮಿಸುವವರೆಗೆ ನೀಮುಚ್ವಾಲಾ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

      ನೀಮುಚ್ವಾಲಾ ಅವರು ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸದ ಬೆನ್ನಲ್ಲೇ ಕಂಪನಿಯ ಸ್ಕ್ರಿಫ್ಟ್ ಶೇ. 2 ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap