ಮದುವೆಗೆ ನಿರಾಕರಿಸಿದ ಯುವಕನ ಮೇಲೆ ಯುವತಿಯಿಂದ ಆಸಿಡ್ ದಾಳಿ!!

ಆಲಿಘಡ :

      ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಹುಡುಗಿಯೊಬ್ಬಳು ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಆಲಿಗಢ್ ನಲ್ಲಿ ನಡೆದಿದೆ.

      ಫೈಜದ್ ಎಂಬ ಹುಡುಗನ ಮೇಲೆ ಆಸಿಡ್ ಎರಚಲಾಗಿದೆ. ಈತ ಕಳೆದ 6 ತಿಂಗಳಿಂದ ಒರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತ ಹುಡುಗಿಯನ್ನು ನಿರ್ಲಕ್ಷ್ಯಿಸುತ್ತಿದ್ದ. ಆದರೆ, ಆರೋಪಿ ಯುವತಿ ಮಾತ್ರ ತನ್ನನ್ನು ಮದುವೆಯಾಗುವಂತೆ ಹುಡುನನ್ನು ಒತ್ತಾಯಿಸಿದ್ದಾಳೆ. ಹೀಗಾಗಿ ಆತ ಈಕೆಯ ಜೊತೆಗೆ ಮಾತನಾಡುವುದನ್ನು ಹಾಗೂ ಭೇಟಿಯಾಗುವುದನ್ನೇ ಬಿಟ್ಟಿದ್ದ. ಅಲ್ಲದೆ, ಆಕೆಯ ಮೊಬೈಲ್ ಕರೆಗಳನ್ನೂ ಸಹ ಸ್ವೀಕರಿಸುವುದನ್ನು ನಿಲ್ಲಿಸಿದ್ದ. ಇದೇ ಕಾರಣಕ್ಕಾಗಿ ಗುರುವಾರ ಬೆಳಗ್ಗೆ ಯುವಕ ತನ್ನ ಮನೆಯ ಹತ್ತಿರದ ಅಂಗಡಿ ಎದುರು ನಿಂತಿದ್ದಾಗ ದಿಢೀರ್ ದಾಳಿ ನಡೆಸಿ ಮುಖಕ್ಕೆ ಆಸಿಡ್ ಎರಚಿದ್ದಾಳೆ.

      ಆಸಿಡ್ ದಾಳಿಗೆ ತುತ್ತಾದ ಯುವಕನನ್ನು ಹತ್ತಿರದ ಜವಹರ್ಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

      ಸಂತ್ರಸ್ತ ಯುವಕನ ಕುಟುಂಬದವರು ನೀಡಿರುವ ದೂರಿನ ಅನ್ವಯ ಇದೀಗ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಲಂ 326 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap