8 ಗಂಟೆಯಲ್ಲಿ 655ಕಿ.ಮೀ. ತಲುಪುವ ವಂದೇ ಭಾರತ್ ಎಕ್ಸ್’ಪ್ರೆಸ್’!!!

ನವದೆಹಲಿ: 

      ಕೇವಲ 8 ಗಂಟೆಗಳಲ್ಲಿ 655 ಕಿ.ಮೀ ತಲುಪುವ ವಂದೇ ಭಾರತ್ ಎಕ್ಸ್’ಪ್ರೆಸ್’ಗೆ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜಧಾನಿ ದೆಹಲಿಯಲ್ಲಿ ಹಸಿರು ನಿಶಾನೆ ತೋರಿದ್ದಾರೆ.

 

 

     ಈ ವೇಳೆ ಮಾತನಾಡಿದ ಅಮಿತ್ ಶಾ , ನವರಾತ್ರಿ ವಿಶೇಷ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಜನತೆಗೆ ಇಂತಹ ದೊಡ್ಡ ಉಡುಗೊರೆ ನೀಡಿರುವ ಭಾರತೀಯ ರೈಲ್ವೇಗೆ ನನ್ನ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಭಾರತದಲ್ಲಿ ರೈಲನ್ನು ನಿರ್ಮಾಣ ಮಾಡಿದ್ದಕ್ಕೆ ಹೆಮ್ಮೆಯಿದೆ. ತತ್ವಗಳು, ವೇಗ ಹಾಗೂ ಸೇವೆಗಳನ್ನೇ ಗುರಿಯಾಗಿರಿಸಿಕೊಂಡು ರೈಲ್ವೇ ಇಲಾಖೆ ಸಾಧನೆ ಮಾಡಿದೆ. ಸ್ಥಳೀಯ ಪ್ರವಾಸಕ್ಕೆ ಈ ಯೋಜನೆ ಸಹಾಯಕವಾಗಲಿದೆ. ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಸ್ಥಳೀಯ ಪ್ರವಾಸ ಅತ್ಯಂತ ದೊಡ್ಡ ಪಾತ್ರವಹಿಸಲಿದೆ. ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವುದಿಲ್ಲ ಎಂಬ ಯಾವುದೇ ಗ್ರಾಮ ಭಾರತದಲ್ಲಿಲ್ಲ ಎಂದು ತಿಳಿಸಿದ್ದಾರೆ.

    ಮಂಗಳವಾರ ಹೊರತು ಪಡಿಸಿ ವಾರದ 6 ದಿನಗಳ ಕಾಲ ಈ ರೈಲು ಸಂಚರಿಸಲಿದೆ. ಈ ರೈಲಿನಿಂದ ನವದೆಹಲಿಯಿಂದ ಕಟ್ರಾಗೆ ತಲುಪಲು ಈ ಮೊದಲಿಗಿಂತ 4 ಗಂಟೆಗಳ ಸಮಯ ಉಳಿತಾಯವಾಗಲಿದೆ.

      ಆಗಸ್ಟ್ 15ರಂದು ಲೋಕಾರ್ಪಣೆಗೊಂಡಿದ್ದ ಈ ರೈಲು ಭಾರೀ ಜನಮನ್ನಣೆ ಗಳಿಸಿತ್ತು. ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದ್ದು, 1128 ಆಸನಗಳನ್ನು ಹೊಂದಿದೆ. ಇದರಲ್ಲಿ 14 ಬೋಗಿಗಳು ಜನರಲ್ ಚೇರ್ ಗಳಾಗಿವೆ. ಅದರಲ್ಲಿ 936 ಆಸನಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link