ಬಾಲಿವುಡ್ ಸೂಪರ್’ಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅಂಗಗಳನ್ನು ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಅಮಿತಾಬ್ ಹಂಚಿಕೊಂಡಿದ್ದಾರೆ. ಅಂಗಿ ಮೇಲೆ ಹಸಿರು ರಿಬ್ಬನ್ ಧರಿಸಿರುವ ಅಮಿತಾಬ್, ನಾನು ಅಂಗಾಂಗ ದಾನ ಮಾಡ್ತಿದ್ದೇನೆ. ಅದರ ಪವಿತ್ರತೆಗಾಗಿ ಈ ರಿಬ್ಬನ್ ಧರಿಸಿದ್ದೇನೆ ಎಂದಿದ್ದಾರೆ. “ಗ್ರೀನ್ ರಿಬ್ಬನ್ ಧರಿಸುವುದರ ವ್ಯತ್ಯಾಸ .. ನಾನು ಎ ಪ್ಲೆಡ್ಜ್ಡ್ ಆರ್ಗನ್ ದಾನಿ! .. ಇನ್ನೊಬ್ಬರಿಗೆ ಜೀವವನ್ನು ಕೊಡುವುದು” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
T 3675 – I am a pledged ORGAN DONOR .. I wear the green ribbon of its sanctity !!? pic.twitter.com/EIxUJzkGU6
— Amitabh Bachchan (@SrBachchan) September 29, 2020
ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅವರು ಫೋಟೋಗಳನ್ನು ಹಾಗೂ ತಂದೆಯ ಮಾತುಗಳನ್ನು ಹಂಚಿಕೊಳ್ತಿರುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವ ಅಮಿತಾಬ್ ಬಚ್ಚನ್ ಈಗ ಮಹತ್ವದ ಘೋಷಣೆ ಮಾಡಿದ್ದಾರೆ.
ಅನೇಕ ಅಭಿಮಾನಿಗಳು ಅಮಿತಾಬ್ ನಡೆದ ದಾರಿಯಲ್ಲಿ ನಡೆಯುತ್ತಾರೆ. ಅಮಿತಾಬ್ ಟ್ವೀಟ್ ನಂತ್ರ ಕೆಲ ಅಭಿಮಾನಿಗಳು ತಮ್ಮ ದಾನದ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು ತಾವೂ ಅಂಗಾಂಗ ದಾನ ಮಾಡುವುದಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ