ಜಮ್ಮು : ಮನೆಯೊಳಗೆ ಅಡಗಿದ್ದ ಮೂವರು ಉಗ್ರರ ಹತ್ಯೆ!!

ಶ್ರೀನಗರ:

      ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರ ಉಗ್ರರನ್ನು ಸದೆಬಡಿಯಲಾಗಿದೆ.

      ಜಮ್ಮು-ಕಾಶ್ಮೀರದ ಹೊರವಲಯದ ಅನಂತ್ ನಾಗ್ ನಲ್ಲಿರುವ ಪಾಜಲ್ ಪುರ್ ನ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿದ್ದು, ಈ ಮಾಹಿತಿ ಪಡೆದು ಭದ್ರತಾ ಪಡೆ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿತ್ತು. ಈ ಸಂದರ್ಭದಲ್ಲಿ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ, ಭಾರತೀಯ ಸೇನಾ ಪಡೆ ಪ್ರತಿ ದಾಳಿ ಮುಂದುವರಿಸಿದ್ದು, ಈ ಸಂದರ್ಭದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.

      ಎನ್‌ಕೌಂಟರ್‌ನಲ್ಲಿ ಯೋಧರೊಬ್ಬರಿಗೆ ಗಾಯವಾಗಿದ್ದು,  ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎನ್ನುವ ಮಾಹಿತಿ ಲಭ್ಯವಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap