ಸೇನೆಯಿಂದ ಖಡಕ್ ವಾರ್ನಿಂಗ್ : ಗಡಿ ದಾಟಿ ಬಂದವರು ಜೀವಂತವಾಗಿರುವುದಿಲ್ಲ!!

ನವದೆಹಲಿ:

       ಗಡಿ ದಾಟಿ ಕಾಶ್ಮೀರಿ ಕಣಿವೆಗೆ ಬಂದವರನ್ನು ಜೀವಂತವಾಗಿ ವಾಪಸ್ ಹೋಗಲು ಬಿಡುವುದಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಉಗ್ರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. 

       ಕಾರ್ಪ್ಸ್‌ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್‌.ಧಿಲ್ಲಾನ್ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸ್ಥಳೀಯ ಉಗ್ರರ ತಾಯಂದಿರು ಬಂದೂಕು ಮರಳಿಸುವಂತೆ ತಮ್ಮ ಮಕ್ಕಳಿಗೆ ಮನವಿ ಮಾಡಿ. ಜೊತೆಗೆ ಭಯೋತ್ಪಾದನೆ ಬಿಟ್ಟು ಮುಖ್ಯವಾಹಿನಿಗೆ ಬನ್ನಿ ಎಂದು ತಮ್ಮ ಮಕ್ಕಳಿಗೆ ಮನವಿ ಮಾಡಿ. ಇಲ್ಲದಿದ್ದರೆ, ನಿಮ್ಮ ಮಕ್ಕಳು ಗನ್ ಕೈಗೆತ್ತಿಕೊಳ್ಳುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ.  ಸೇನೆ ಅವರನ್ನು ಕೊಲ್ಲಬೇಕಾಗುತ್ತದೆ ಎಂದಿದ್ದಾರೆ.

      ಕಾಶ್ಮೀರಿ ಸಮಾಜದಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ, ಮಾಧ್ಯಮದ ಮೂಲಕ ನಾನು ಕಾಶ್ಮೀರ ಕಣಿವೆಯ ತಾಯಂದಿರಿಗೆ ಮನವಿ ಮಾಡುವುದು ಏನೆಂದರೆ, ಭಯೋತ್ಪಾದನೆಗೆ ಸೇರಿರುವ ಅವರ ಮಕ್ಕಳಿಗೆ ಶರಣಾಗಿ ಮುಖ್ಯ ವಾಹಿನಿಗೆ ಸೇರಿಕೊಳ್ಳಲು ಮನವಿ ಮಾಡಿಕೊಳ್ಳಿ ಎಂದು ನಾನು ಕಣಿವೆ ರಾಜ್ಯದಲ್ಲಿರುವ ಅಮ್ಮಂದಿರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

      ಫೆಬ್ರುವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಮೇಲೆ ಆತ್ಮಾಹುತಿ ದಾಳಿ ನಡೆದ 100 ಗಂಟೆಗಳಲ್ಲಿ ಜೈಷ್-ಇ- ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ನಾಯಕರನ್ನು ಸೇನೆ ಹತ್ಯೆಮಾಡಿದೆ ಎಂದು ಧಿಲ್ಲೋನ್ ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link