ತುರುವೇಕೆರೆ:
ಪಟ್ಟಣದ ಎಪಿಎಂಸಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಆರ್.ಇಂದ್ರಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಹಿಂದಿನ ಅಧ್ಯಕ್ಷ ರೇಣಕಪ್ಪ ರಾಜೀನಾಮೆಯಿಂದ ತೆರುವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.

ನಿರ್ದೇಶಕಿ ಬಿ.ಆರ್.ಇಂದ್ರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವೆಂದು ಘೋಷಿಸಿದರು. ಚುನಾವಣಾಧಿಕಾರಿಯಾಗಿ ತಹಶೀಲ್ದರ್ ನಾಗರಾಜು ಕರ್ತವ್ಯ ನಿರ್ವಹಿಸಿದರು. ಮಹಿಳೆಯರೊಬ್ಬರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಇದೇ ಪ್ರಥಮವಾಗಿದೆ.
ನೂತನ ಅಧ್ಯಕ್ಷೆ ಬಿ.ಆರ್.ಇಂದ್ರಮ್ಮ ಮಾತನಾಡಿ ಅವಿರೋಧವಾಗಿ ಅದ್ಯಕ್ಷರಾಗಿ ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಸಹ ಸದಸ್ಯರುಗಳಿಗೆ ದನ್ಯವಾದಗಳನ್ನು ತಿಳಿಸಿದರು. ಅದಿಕಾರದ ಅವದಿಯಲ್ಲಿ ರೈತರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಠಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರನ್ನು ಉಪಾದ್ಯಕ್ಷ ನರಸಿಂಹ, ಸದಸ್ಯರಾದ ಹಿಂಡಮಾರನಹಳ್ಳಿನಾಗರಾಜು, ವಿಜೇಂದ್ರಕುಮಾರ್, ರೇಣಕಪ್ಪ, ಛಾಯಾಶಂಕರೇಗೌಡ, ಮಧು, ನರಸಿಂಹರಾಜು, ಮಾಚೇನಹಳ್ಳಿಲೋಕೇಶ್, ಜೆಡಿಎಸ್ ಅದ್ಯಕ್ಷ ಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವರಾಜು, ಡಾ.ನವೀನ್ ಕುಮಾರ್, ಮುಖಂಡರಾದ ಸೋಮಣ್ಣ, ಹಾಗೂ ಜೆಡಿಎಸ್ ಮುಖಂಡರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








