ಲಾಹೋರ್ :
ಮುಂಬೈ ದಾಳಿಯ ಸಂಚುಕೋರನಾಗಿದ್ದಂತ ಲಷ್ಕರ್ ಎ ತೊಯ್ಬಾ(ಎಲ್ಇಟಿ) ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಈ ಕುರಿತಂತೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದ್ದು, ಭಯೋತ್ಪಾದನೆ ಕೃತ್ಯಕ್ಕೆ ಹಣಕಾಸಿನ ನೆರವು ನೀಡುವ ಆರೋಪಕ್ಕೆ ಸಂಬಂಧಿಸಿದಂತೆ ಝಕಿ ಉರ್ ರೆಹಮಾನ್ ಲಖ್ವಿಯನ್ನು ಬಂಧಿಸಿರುವುದಾಗಿ ತಿಳಿಸಿದೆ.
ಅಂದಹಾಗೇ ಇದೇ ಲಷ್ಕರ್ ಎ ತೋಯ್ಬಾದ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿ, ಮುಂಬೈ ದಾಳಿಯ ಸಂಚುಕೋರನಾಗಿದ್ದನು.
2008ರ ಮುಂಬೈ ದಾಳಿ ನಂತರ ಲಖ್ವಿಯನ್ನು ಜಾಗತಿಕ ಉಗ್ರ ಎಂದು ಗುರುತಿಸಲಾಗಿತ್ತು. ಇನ್ನು ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿ ಪಾಕ್ ಸರ್ಕಾರಕ್ಕೆ ಅನುಮೋದನೆ ನೀಡಿದ್ದು ಇದಾದ ಕೆಲ ದಿನಗಳಲ್ಲೇ ಲಖ್ವಿ ಬಂಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
