ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ : ಐವರಿಗೆ ಮರಣದಂಡನೆ!!

ರಿಯಾದ್:

      ಪತ್ರಕರ್ತ ಜಮಾಲ್‌ ಖಶೋಗ್ಗಿಯವರನ್ನು ಇಸ್ತಾಂಬುಲ್‍ ನಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಐದು ಮಂದಿಗೆ ಮರಣದಂಡನೆ ವಿಧಿಸಲಾಗಿದೆ.

      2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ಹತ್ಯೆಗೀಡಾಗಿದ್ದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಅಂಕಣಕಾರರಾಗಿದ್ದ ಜಮಾಲ್‌ ಖಶೋಗ್ಗಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 11 ಆರೋಪಿಗಳ ಪೈಕಿ ಐವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಸೌದಿ ನ್ಯಾಯಾಲಯ ತೀರ್ಪು ನೀಡಿದ್ದು, ಮೂವರಿಗೆ ಒಟ್ಟು 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯಾದ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.

      ಅಮೆರಿಕಾ ನಿವಾಸಿಯಾಗಿದ್ದ ಜಮಾಲ್‌ ಖಶೋಗ್ಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಆವರ ಕಟು ಟೀಕಾಕಾರರಾಗಿದ್ದರು. ಕೊನೆಯ ಬಾರಿ ಖಶೋಗಿ ಇಸ್ತಾಂಬುಲ್‍ ನಲ್ಲಿನ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್ 2, 2018ರಂದು ಕಾಣಿಸಿಕೊಂಡಿದ್ದರು.

      ಸ್ವಯಂ ಗಡೀಪಾರಿಗೆ ಒಳಗಾಗಿದ್ದ ಜಮಾಲ್‌ ಅವರು 2017ರಿಂದ ಅಮೆರಿಕದಲ್ಲಿ ವಾಸವಿದ್ದರು. ಟರ್ಕಿ ಯುವತಿಯೊಬ್ಬರನ್ನು ವಿವಾಹವಾಗುವ ಸಂಬಂಧದ ದಾಖಲೆ ಪಡೆಯುವ ಸಲುವಾಗಿ ಅವರು ಕಾನ್ಸುಲೇಟ್‌ಗೆ ತೆರಳಿದ್ದರು. ಆಗ ಅವರನ್ನು ಹತ್ಯೆ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap