ದೆಹಲಿ :
ಆಯೋಧ್ಯೆಯ ರಾಮಜನ್ಮಭೂಮಿ – ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 15ಕ್ಕೆ ಮುಂದೂಡಿದೆ.
ಆಯೋಧ್ಯೆಯ ಜಮೀನು ವಿವಾದ ಪ್ರಕರಣದ ಇತ್ಯರ್ಥಕ್ಕೆ ನೇಮಕ ಮಾಡಲಾಗಿದ್ದ ಮಧ್ಯಸ್ಥಿಕೆ ಸಮಿತಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸುಪ್ರೀಂ ಕೋರ್ಟ್ ನೇತೃತ್ವದ ಸಾಂವಿಧಾನಿಕ ಪೀಠ ಕಾಲಾವಕಾಶ ನೀಡಿದ್ದು, ಆ.15ರ ಒಳಗಾಗಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ತ್ರಿಸದಸ್ಯ ಸಭೆ ನೀಡಿದ ವಿಸ್ಕೃತ ವರದಿಯ ಅಧಾರದಲ್ಲಿ ಇಂದು ವಿಚಾರಣೆ ಕೈಗೊಳ್ಳಲಾಗಿತ್ತು. ಆದರೂ ಈ ಸಮಿತಿ ಪ್ರಕರಣದ ಸೌಹಾರ್ದಯುತ ಮತ್ತು ಶಾಶ್ವತ ಪರಿಹಾರಕ್ಕೆ ಮತ್ತಷ್ಟು ಸಮಯಾವಕಾಶ ಕೋರಿದ ಪರಿಣಾಮ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಇದೇ ವೇಳೆ ಮಧ್ಯಸ್ಥಿಕೆ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದೆ. ಸರ್ವೋಚ್ಚ ನ್ಯಾಯಾಲಯ ಕಾರ್ಯಚಟುವಟಿಕೆಗಳಿಗೆ ನಾಳೆಯಿಂದ ಬೇಸಿಗೆ ರಜೆ ಆರಂಭವಾಗಲಿದ್ದು, ಇಂದು ಆರಂಭವಾಗಲಿರುವ ಅಯೋಧ್ಯೆ ಪ್ರಕರಣ ಈ ವರ್ಷ ವಿಚಾರಣೆಗೆ ಒಳಗಾಗುತ್ತಿರು ಕೊನೆಯ ಪ್ರಕರಣವಾಗಿದೆ.