ನವದೆಹಲಿ :
ಮಾರ್ಚ್ 27 ರಿಂದ 9 ದಿನಗಳಲ್ಲಿ ಬ್ಯಾಂಕ್ಗಳು ಸತತ 7 ದಿನಗಳವರೆಗೆ ಮುಚ್ಚಿರಲಿವೆ ಎನ್ನಲಾಗಿದೆ.
ಹಣಕಾಸು ವರ್ಷದ ಕೊನೆಯ ದಿನದ ಕಾರಣ ಬ್ಯಾಂಕ್ ಸೇವೆಗಳನ್ನು 2021ರ ಮಾರ್ಚ್ 31ರಂದು ಸ್ಥಗಿತಗೊಳಿಸಲಾಗುತ್ತದೆ. ತದ ನಂತರ 2021ರ ಏಪ್ರಿಲ್ 1, 2 ಮತ್ತು 4ರಂದು ಖಾತೆಗಳ ಸ್ಥಗಿತದಿಂದಾಗಿ ಬ್ಯಾಂಕ್ಗಳು ಮುಚ್ಚಿರುತ್ತಿವೆ. ಗುಡ್ ಫ್ರೈಡೇ ಮತ್ತು ಭಾನುವಾರದಂದು ರಜೆ ಇರಲಿದೆ.
ಆದ್ದರಿಂದ ಜನ ತಮ್ಮ ಬ್ಯಾಂಕ್‌ಗೆ ಸಂಬಂಧಿತ ಕೆಲಸವನ್ನು ಮಾರ್ಚ್ 30(ಮಂಗಳವಾರ) ಮತ್ತು ಏಪ್ರಿಲ್ 3(ಶನಿವಾರ) ಎರಡು ದಿನಗಳಲ್ಲಿ ಮಾತ್ರ ಪೂರ್ಣಗೊಳಿಸಬಹುದು. ಕೆಳಗೆ ನೀಡಲಾದ ರಜಾದಿನಗಳ ಪಟ್ಟಿಯನ್ನು ಆರ್‌ಬಿಐ ನೆಗೋಷಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿ ತಿಳಿಸಿದೆ.
ರಾಷ್ಟ್ರೀಯ ರಜಾದಿನಗಳು :
- 2021ರ ಮಾರ್ಚ್ 27- ನಾಲ್ಕನೇ ಶನಿವಾರ
- 2021ರ ಮಾರ್ಚ್ 28- ವಾರದ ರಜೆ (ಭಾನುವಾರ)
- 2021ರ ಮಾರ್ಚ್ 29 ಹೋಳಿ (ಎರಡನೇ ದಿನ)
- 2021ರ ಮಾರ್ಚ್ 31- 2021ರ ಹಣಕಾಸು ವರ್ಷ ಮುಕ್ತಾಯ
- 2021ರ ಏಪ್ರಿಲ್ 01- ಬ್ಯಾಂಕ್ಗಳು ತಮ್ಮ ವಾರ್ಷಿಕ ಖಾತೆಗಳನ್ನು ಸ್ಥಗಿತಗೊಳಿಸಲು ಆಂತರಿಕ ಕೆಲಸ
- 2021ರ ಏಪ್ರಿಲ್ 02 – ಗುಡ್ ಫ್ರೈಡೇ
- 2021ರ ಏಪ್ರಿಲ್ 04- ವಾರದ ರಜೆ (ಭಾನುವಾರ)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಾರ, ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಬಹುದು ಮತ್ತು ವಿವಿಧ ಬ್ಯಾಂಕ್ಗಳಲ್ಲಿ ವ್ಯತ್ಯಾಸದಿಂದ ಕೂಡಿರಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ