ಹಳಿ ತಪ್ಪಿದ ರೈಲು; 7 ಜನರ ಸಾವು, ಅನೇಕರಿಗೆ ಗಾಯ

ನವದೆಹಲಿ :

 ಬಿಹಾರದ ರಾಜಧಾನಿ ಪಾಟ್ನಾ ಸಮೀಪ ಸಂಭವಿಸಿದ ರೈಲು ದುರಂತದಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

  ಸೀಮಾಂಚಲ್​ ಎಕ್ಸ್​ಪ್ರೆಸ್​​ ಬಿಹಾರದ ಜೋಗ್​ಬನಿಯಿಂದ ದೆಹಲಿಯ ಆನಂದ್​​ ವಿಹಾರ್​ಗೆ ತೆರಳುತ್ತಿತ್ತು. ಬೆಳಗ್ಗೆ 4 ಗಂಟೆ ಸುಮಾರಿಗೆ ವೈಶಾಲಿ ಜಿಲ್ಲೆಯ ಸಹದಾಯ್ ಬುಜರ್ಗ್​ನಲ್ಲಿ ರೈಲು ಹಳಿ ತಪ್ಪಿದೆ. ಈ ವೇಳೆ 11 ಬೋಗಿಗಳು ನೆಲಕ್ಕುರುಳಿವೆ. ಘಟನೆ ನಡೆಯುವ ಸಂದರ್ಭದಲ್ಲಿ ರೈಲು ಬಹಳ ವೇಗವಾಗಿ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ತಲಾ ಒಂದು ಜನರಲ್​ ಕೋಚ್​, ಎಸಿ ಕೋಚ್​, 3 ಸ್ಲೀಪರ್​ ಕೋಚ್​ಗಳು ಸೇರಿ ಒಟ್ಟು 9 ಬೋಗಿಗಳು ಹಳಿ ತಪ್ಪಿವೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ರೈಲ್ವೆ ಸಚಿವ ಪಿಯೂಷ್​ ಗೋಯಲ್​, “ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ,” ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap