ಹೊಸಪೇಟೆ :
ಜ.3ರಂದು ಆಂಧ್ರ ಪ್ರದೇಶದ ಗುಂಟೂರಿನಿಂದ ಗೋವಾಕ್ಕೆ ಹೊರಟಿದ್ದ ರೈಲಿನಲ್ಲಿ ಕಳೆದು ಹೋಗಿದ್ದ ಲಗೇಜ್ ಬ್ಯಾಗನ್ನು ಇಲ್ಲಿನ ರೈಲ್ವೇ ಅಧಿಕಾರಿಗಳು ಗುಂಟೂರಿನ ನಿವಾಸಿಗಳಾದ ಸಾಯಿಕೃಷ್ಣ ಹಾಗು ದಿವ್ಯಾಶ್ರೀ ಅವರಿಗೆ ಹಿಂದಿರುಗಿಸಿದರು.
ಬಿಎಸ್ಸಿ ಅಗ್ರಿಕಲ್ಚರ್ ಪರೀಕ್ಷೆಗೆಂದು ಗೋವಾಕ್ಕೆ ಹೊರಟಿದ್ದ ಸಾಯಿಕೃಷ್ಣ ಹಾಗು ದಿವ್ಯಶ್ರೀ ಅವರ ಬ್ಯಾಗನ್ನು ಆಕಸ್ಮಿಕವಾಗಿ ಯಾರೋ ಪ್ರಯಾಣಿಕರು ಕೆಳಗೆ ಇಳಿಸಿಕೊಂಡಿದ್ದಾರೆ. ಬಳಿಕ ಇದು ತಮ್ಮದಲ್ಲ ಎಂದು ಗೊತ್ತಾಗಿ ಮರಳಿ ರೈಲ್ವೇ ಅಧಿಕಾರಿಗಳಿಗೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದರು. ಈ ಕುರಿತು ಹುಬ್ಬಳ್ಳಿಯಲ್ಲಿ ಸಾಯಿಕೃಷ್ಣ ಹಾಗು ದಿವ್ಯಶ್ರೀ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.
ಹೊಸಪೇಟೆಯಲ್ಲಿ ಬ್ಯಾಗ್ ಪತ್ತೆಯಾದ ಹಿನ್ನೆಲೆಯಲ್ಲಿ ಅದರಲ್ಲಿದ್ದ 10ಸಾವಿರ ರೂ.ನಗದು, ರೋಲ್ಡ್ ಗೋಲ್ಡ್ ಆಭರಣಗಳು ಸೇರಿದಂತೆ ಬಟ್ಟೆ ಬರೆಗಳು ಎಲ್ಲವೂ ಸರಿಯಾಗಿವೆ ಎಂದು ಕಳೆದುಕೊಂಡ ಸಾಯಿಕೃಷ್ಣ ಹಾಗು ದಿವ್ಯಾಶ್ರೀ ಲಿಖಿತ ಹೇಳಿಕೆ ನೀಡಿದರು.
ಈ ಸಂಧರ್ಭದಲ್ಲಿ ರೈಲ್ವೇ ನಿಲ್ದಾಣ ಅಧೀಕ್ಷಕ ಮಹ್ಮದ್ ಉಮರ್ ಬಾನಿ, ವ್ಯವಸ್ಥಾಪಕ ಶಿವರಾಜ್ ಮೀನಾ, ಆರ್‍ಪಿಎಸ್ ಸಿಬ್ಬಂದಿ ನಿಶಾ ಚವ್ಹಾಣ್, ರಾಜ್ಯ ರೈಲ್ವೇ ಪೋಲೀಸರಾದ ಮಂಜುನಾಥ, ಸಂತೋಷ, ಶರಣಪ್ಪ, ಕೆ.ಗುರುರಾಜ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
