ನಿನ್ನೆ ಇದ್ದು ವಿಚಾರಣೆಗೆ ರೆಡ್ಡಿ ಗೈರಾಗಿದ್ದರು , ಅಲಿಖಾನ್ ಮಾತ್ರ ವಿಚಾರಣೆಗೆ ಹಾಜರಾಗಿದ್ದರು. ಜನಾರ್ದನ ರೆಡ್ಡಿ ನಿನ್ನೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನೀಡಿದ ಖಡಕ್ ಸೂಚನೆ ಮೇರೆಗೆ ಇಂದು ರೆಡ್ಡಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಶಾಸಕ ಬಿ.ನಾಗೇಂದ್ರಗೆ ವಿನಾಯಿತಿ:
ಶಾಸಕ ಬಿ. ನಾಗೇಂದ್ರ, ಶಾಸಕಾಂಗ ಸಭೆ ಹಿನ್ನೆಲೆಯಲ್ಲಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದೆ.
ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಸಿಟಿ ಸಿವಿಲ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಇದ್ದು, ಇಂದು ಅವರು ಹಾಜರಾಗಬೇಕಿತ್ತು. ಸದ್ಯ ಕೊರ್ಟ್ ವಿಚಾರಣೆಯನ್ನು ಫೆ. 18 ಕ್ಕೆ ಮುಂದೂಡಿದೆ.