ಜೈಪುರ:
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಸಂಪುಟದ ನಾಲ್ವರು ಸಚಿವರು ಸೇರಿದಂತೆ ಒಟ್ಟು 11 ಬಂಡಾಯಗಾರರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ.
ಚುರು, ಜೈಪುರ, ಪಾಲಿಯ ಜಿಲ್ಲೆಯ ತಲಾ ಎರಡು ಸಚಿವರು, ಶ್ರೀ ಗಂಗಾನಗರ, ಅಲ್ವಾರ್, ಬಿಕನೇರ್, ಬನ್ಸಾವರ್, ದುಂಗಾರ್‌ಪುರದ ತಲಾ ಒಬ್ಬ ಸಚಿವನನ್ನು ಬಿಜೆಪಿ ಉಚ್ಛಾಟಿಸಿದೆ. ಡಿಸೆಂಬರ್ 7ರಂದು ವಿಧಾನಸಭಾ ಚುನಾವಣೆ ನಡೆಯುವ ಮುನ್ನಾ ಈ ಬೆಳವಣಿಗೆ ನಡೆದಿದೆ.
ಕೆಲವರನ್ನು ವಿಧಾನಸಭಾ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಸೂಚಿಸಿತ್ತು. ಆದರೆ ಬಿಜೆಪಿಯ ವಿರೋಧದ ನಡುವೆ ಕೆಲವು ಸಚಿವರು ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಹಾಗಾಗಿ ಬಿಜೆಪಿ ಈ ಕ್ರಮ ಕೈಗೊಂಡಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್ ಲಾಲ್ ಸೈನಿ ಕಳೆದ ರಾತ್ರಿ ಸಚಿವರಿಗೆ ಉಚ್ಛಾಟನಾ ಆದೇಶ ಪತ್ರವನ್ನು ನೀಡಿ, ನಾಮಪತ್ರ ಸಲ್ಲಿಕೆ ಕೈಬಿಡುವಂತೆ ಸೂಚಿಸಿದ್ದಾರೆ.
ಆರೋಗ್ಯ ಸಚಿವ ಸುರೇಂದ್ರ ಗೋಯಲ್, ಹೇಮ್‌ಸಿಂಗ್ ಭಾದನಾ, ರಾಜ್‌ಕುಮಾರ್ ರಿನ್ವಾ, ಧನ್ ಸಿಂಗ್ ರಾವತ್ ಈ ನಾಲ್ವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆದ ಕಾರಣ ಇವರೆಲ್ಲಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ