ಕರಾಚಿ:
ಪಾಕಿಸ್ತಾನದ ಲಾಹೋರ್ ನ ಪ್ರಸಿದ್ಧ ದಾಟಾ ದರ್ಬಾರ್ ಹೊರಗಡೆ ಬಾಂಬ್ ಸ್ಫೋಟಗೊಂಡ ಪರಿಣಾಮ 4 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ದತ್ತಾ ದರ್ಬಾರ್ ಮಸೀದಿ ಹೊರಗಡೆ ಸಾಗುತ್ತಿದ್ದ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಪಂಜಾಬ್ ಪ್ರಾಂತ್ಯದಲ್ಲಿರುವ ಮಸೀದಿಯ ಎರಡನೇ ಗೇಟ್ ಬಳಿ ಎರಡು ಪೊಲೀಸ್ ವಾಹನಗಳ ಹತ್ತಿರವೇ ಈ ದಾಳಿ ನಡೆದಿದೆ.
At least 4 killed including two policemen outside Lahore's #DataDarbar . . The blast occurred near a mobile of the Elite Force. #LahoreBlast pic.twitter.com/YTYVbxPB3r
— Socialist (@Sociali92234960) May 8, 2019
ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಸಾಮಾನ್ಯ ಜನರೊಬ್ಬರು ಸಾವನ್ನಪ್ಪಿದ್ದಾರೆ. 24 ಜನ ಗಂಭೀರವಾಗಿ ಗಾಯಗೊಂಡಿದ್ದು, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.
ಸ್ಫೋಟ ಸಂಭವಿಸಿದಾಗ ನೂರಾರು ಯಾತ್ರಿಕರು ಡಾಟಾ ದರ್ಬಾರ್ ದೇವಾಲಯದ ಒಳಗೆ ಮತ್ತು ಹೊರಗಡೆ ಇದ್ದರು. ರಂಜಾನ್ ಹಬ್ಬದ ಉಪವಾಸ ನಡೆಯುತ್ತಿರುವುದರಿಂದ ಯಾತ್ರಿಕರು ಈ ಸಮಯದಲ್ಲಿ ಡಾಟಾ ದರ್ಬಾರ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಇದೇ ದರ್ಗಾವನ್ನು ಗುರಿಯಾಗಿರಿಸಿಕೊಂಡು 2010 ರಲ್ಲಿ ದಾಳಿ ನಡೆಸಲಾಗಿತ್ತು, 40 ಮಂದಿ ಸಾವನ್ನಪ್ಪಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ