ರೈಲ್ವೆ ನಿಲ್ದಾಣದಿಂದ ಬಿಎಂಟಸಿ ಸೇವೆ ಆರಂಭ..!

ಬೆಂಗಳೂರು

     ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಬಸ್ ಸೇವೆಯನ್ನು ಸೋಮವಾರದಿಂದ ಆರಂಭಗೊಂಡಿದೆ.  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ನಿಂದ ಬಿಎಂಟಿಸಿ ಬಸ್‌ಗಳು ನಗರದ ವಿವಿಧ ಭಾಗಗಳಿಗೆ ಸಂಚರಿಸಲಿದ್ದು ಇದರಿಂದಾಗಿ ರೈಲು ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಸಾಗಲು ಆಟೋ, ಕ್ಯಾಬ್ ಅವಲಂಬಿಸಿದ್ದ ಸಾವಿರಾರು ಜನರಿಗೆ ಸಹಾಯಕವಾಗಲಿದೆ.

ಪ್ರವೇಶ ದ್ವಾರ

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ೧.೭ ಕೋಟಿ ರೂ. ವೆಚ್ಚದಲ್ಲಿ ೩ನೇ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಜೂನ್‌ನಲ್ಲಿ ಇದು ಉದ್ಘಾಟನೆಗೊಂಡಿದ್ದು, ಇಲ್ಲಿಗೆ ಈಗ ಬಿಎಂಟಿಸಿ ಬಸ್ ಆಗಮಿಸಲಿದೆ. ಇದರಿಂದಾಗಿ ಜನರು ನೇರವಾಗಿ ರೈಲು ನಿಲ್ದಾಣ ತಲುಪಬಹುದಾಗಿದೆ.

ಫ್ಲಾಟ್ ಫಾರಂ ಸಂಪರ್ಕ

     ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಗೇಟ್ ನಂಬರ್ ೩ ನೇರವಾಗಿ ರೈಲು ನಿಲ್ದಾಣದ ಫ್ಲಾಟ್ ಫಾರಂ ನಂಬರ್ ೧ಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಯೇ ರೈಲ್ವೆ ಇಲಾಖೆ ಟಿಕೆಟ್ ಕೌಂಟರ್ ತೆರೆದಿದೆ. ಆದ್ದರಿಂದ ಬಿಎಂಟಿಸಿ ಬಸ್‌ಗೆ ಬರುವ ಪ್ರಯಾಣಿಕರು ಇಲ್ಲಿ ಟಿಕೆಟ್ ಪಡೆದು ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗಲಿದೆ.
ಮೆಜೆಸ್ಟಿಕ್‌ನಿಂದ ನಡೆಯಬೇಕಿತ್ತು

     ಸ್ಥಳಾವಕಾಶದ ಕೊರತೆ ಕಾರಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದೊಳಕ್ಕೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಜನರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದು ಸುರಂಗ ಮಾರ್ಗದ ಮೂಲಕ ರೈಲ್ವೆ ನಿಲ್ದಾಣಕ್ಕೆ ಬರಬೇಕಿತ್ತು. ಇದಕ್ಕಾಗಿ ಸುಮಾರು ದೂರ ನಡೆಯಬೇಕಿತ್ತು. ಈಗ ಬಸ್ ನೇರವಾಗಿ ರೈಲು ನಿಲ್ದಾಣಕ್ಕೆ ಹೋಗಲಿದೆ.ನೂತನ ಸೇವೆಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬೆಂಗಳೂರು ಕೇಂದ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್, ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು. ಬಿಎಂಟಿಸಿ ಎಂ.ಡಿ. ಸಿ. ಶಿಖಾ ಇನ್ನಿತರರಿದ್ದರು.

ಇನ್ನು ರೈಲ್ವೆ ನಿಲ್ದಾಣದಿಂದ ಹೊರಡುವ 

ನಿರ್ಗಮನ ಸಮಯ – ವೇಳಾಪಟ್ಟಿ ಸಂಖ್ಯೆ – ಗಮ್ಯಸ್ಥಾನ
ಬೆಳಿಗ್ಗೆ 6           – 333/4         – ಕಡುಗೋಡಿ
ಬೆಳಿಗ್ಗೆ 7          – 331 A / 2     – ಕಡುಗೋಡಿ
ಬೆಳಿಗ್ಗೆ 8          – 333/8          – ಐಟಿಪಿಎಲ್
ಬೆಳಿಗ್ಗೆ 9          – 333/5          – ಐಟಿಪಿಎಲ್
ಬೆಳಿಗ್ಗೆ 10        – 333/4          – ಕಾಡುಗೋಡಿ
ಮಧ್ಯಾಹ್ನ 12      – 333/8        – ಕಡುಗೋಡಿ
ಮಧ್ಯಾಹ್ನ 1       – 333/5         – ಕಡುಗೋಡಿ
ರಾತ್ರಿ 9           – 333/4         – ಐಟಿಪಿಎಲ್
ರಾತ್ರಿ 10         – 331 A / 2    – ಕಡುಗೋಡಿ

ಕೆಎಸ್ಆರ್ ರೈಲ್ವೆ ಸ್ಟೇಷನ್ ಗೇಟ್ 3 ರಿಂದ ಹೊಸ್ಕೋಟೆ ಕಡೆಗೆ ಬಸ್ಸುಗಳು

ನಿರ್ಗಮನ ಸಮಯ – ವೇಳಾಪಟ್ಟಿ ಸಂಖ್ಯೆ           – ಗಮ್ಯಸ್ಥಾನ
ಬೆಳಿಗ್ಗೆ 6           – ಕೆಬಿಎಸ್ -12 HK / 8 – ಬೊಮ್ಮನಹಳ್ಳಿ
ಬೆಳಿಗ್ಗೆ 7           – ಕೆಬಿಎಸ್ -12 HK / 7 – ಹೊಸ್ಕೋಟೆ
ಬೆಳಿಗ್ಗೆ 8          – ಕೆಬಿಎಸ್ -12 HK / 4 – ಹೊಸ್ಕೋಟೆ
ಬೆಳಿಗ್ಗೆ 9          – ಕೆಬಿಎಸ್ -12 HK / 8 – ಹೊಸ್ಕೋಟೆ
ಬೆಳಿಗ್ಗೆ 10        – ಕೆಬಿಎಸ್ -12 HK / 4 – ಹೊಸ್ಕೋಟೆ
ಮಧ್ಯಾಹ್ನ 12     – ಕೆಬಿಎಸ್ -12 HK / 11 – ಹೊಸ್ಕೋಟೆ
ಮಧ್ಯಾಹ್ನ 1       – ಕೆಬಿಎಸ್ -12 HK / 20 – ಹೊಸ್ಕೋಟೆ
ರಾತ್ರಿ 9           – ಕೆಬಿಎಸ್ -12 HK / 7 – ಹೊಸ್ಕೋಟೆ
ರಾತ್ರಿ 10        – ಕೆಬಿಎಸ್ -12 HK / 11 – ಹೊಸ್ಕೋಟೆ

ಕೆಎಸ್‌ಆರ್ ರೈಲ್ವೆ ಸ್ಟೇಷನ್ ಗೇಟ್ 3 ರಿಂದ ಅಟ್ಟಿಬೆಲೆ ಕಡೆಗೆ ಬಸ್ಸುಗಳು

ನಿರ್ಗಮನ ಸಮಯ    – ವೇಳಾಪಟ್ಟಿ ಸಂಖ್ಯೆ – ಗಮ್ಯಸ್ಥಾನ
ಬೆಳಿಗ್ಗೆ 6               – 360 k / 24    – ಅತ್ತೀಬೆಲೆ
ಬೆಳಿಗ್ಗೆ 7               – 360 K / 18     – ಅತ್ತೀಬೆಲೆ
ಬೆಳಿಗ್ಗೆ 8               – 360 K / 6       – ಅತ್ತೀಬೆಲೆ
ಬೆಳಿಗ್ಗೆ 9              – 360 k / 8        – ಅತ್ತೀಬೆಲೆ
ಬೆಳಿಗ್ಗೆ 10             – 360 k / 2       – ಅತ್ತೀಬೆಲೆ
ಮಧ್ಯಾಹ್ನ 12         – 360 k / 16     – ಅತ್ತೀಬೆಲೆ
ಮಧ್ಯಾಹ್ನ 1           – 360 k / 9       – ಅತ್ತೀಬೆಲೆ
ರಾತ್ರಿ 9               – 360 K / 18     – ಅತ್ತೀಬೆಲೆ
ರಾತ್ರಿ 10             – 360 K / 6       – ಅತ್ತೀಬೆಲೆ

ಕೆಎಸ್‌ಆರ್ ರೈಲ್ವೆ ಸ್ಟೇಷನ್ ಗೇಟ್ 3 ರಿಂದ ಸರ್ಜಾಪುರ ಕಡೆಗೆ ಬಸ್ಸುಗಳು

ನಿರ್ಗಮನ ಸಮಯ – ವೇಳಾಪಟ್ಟಿ ಸಂಖ್ಯೆ – ಗಮ್ಯಸ್ಥಾನ

ಬೆಳಿಗ್ಗೆ 6.30      – 342 F/ 1   – ಸರ್ಜಾಪುರ
ಬೆಳಿಗ್ಗೆ 7.30      – 342 F / 18 – ಸರ್ಜಾಪುರ
ಬೆಳಿಗ್ಗೆ 8.30      – 342 F / 17 – ಸರ್ಜಾಪುರ
ಬೆಳಿಗ್ಗೆ 9.30      – 342 F / 11 – ಸರ್ಜಾಪುರ
ಬೆಳಿಗ್ಗೆ 10.30    – 342 F / 1 – ಡೊಮ್ಮಸಂದ್ರ
ಮಧ್ಯಾಹ್ನ 12.30 – 342 F / 19 – ಸರ್ಜಾಪುರ
ಮಧ್ಯಾಹ್ನ 1.30   – 342 F / 6 – ಸರ್ಜಾಪುರ
ರಾತ್ರಿ 9.30       – 342 F / 3 – ಸರ್ಜಾಪುರ
ರಾತ್ರಿ 10.30     – 342 F / 14 – ಸರ್ಜಾಪುರ

ಕೆಎಸ್‌ಆರ್ ರೈಲ್ವೆ ಸ್ಟೇಷನ್ ಗೇಟ್ 3 ರಿಂದ ಯಲಹಂಕ ಕಡೆಗೆ ಬಸ್ಸುಗಳು

ನಿರ್ಗಮನ ಸಮಯ   – ವೇಳಾಪಟ್ಟಿ ಸಂಖ್ಯೆ – ಗಮ್ಯಸ್ಥಾನ

ಬೆಳಿಗ್ಗೆ 6.30         – 284 D / 16   – ಯಲಹಂಕ
ಬೆಳಿಗ್ಗೆ 7.30         – 398 MC / 1 – ದೇವನಹಳ್ಳಿ
ಬೆಳಿಗ್ಗೆ 8.30         – 284 D / 16   – ಯಲಹಂಕ
ಬೆಳಿಗ್ಗೆ 9.30        – 298 M / 12  – ದೇವನಹಳ್ಳಿ
ಬೆಳಿಗ್ಗೆ 10.30      – 284 D / 16    – ಯಲಹಂಕ
ಮಧ್ಯಾಹ್ನ 12.40   – 298 M / 12  – ದೇವನಹಳ್ಳಿ
ಮಧ್ಯಾಹ್ನ 1.30     – 284/6          – ಯಲಹಂಕ
ರಾತ್ರಿ 9.30         – 284/1          – ಯಲಹಂಕ
ರಾತ್ರಿ 10.30       – 284 D / 16   – ಯಲಹಂಕ

ಕೆಎಸ್‌ಆರ್ ರೈಲ್ವೆ ಸ್ಟೇಷನ್ ಗೇಟ್ 3 ರಿಂದ ನಾಗವಾರ ಕಡೆಗೆ ಬಸ್ಸುಗಳು

ನಿರ್ಗಮನ ಸಮಯ   – ವೇಳಾಪಟ್ಟಿ ಸಂಖ್ಯೆ – ಗಮ್ಯಸ್ಥಾನ

ಬೆಳಿಗ್ಗೆ 6.30       – 300 H / 9    – ಕೆ.ಆರ್.ಪುರಂ
ಬೆಳಿಗ್ಗೆ 7.30       – 300 HC / 4  – ಕೆ.ಆರ್.ಪುರಂ
ಬೆಳಿಗ್ಗೆ 8.30       – 300 H / 4    – ಕೆ.ಆರ್.ಪುರಂ
ಬೆಳಿಗ್ಗೆ 9.30       – 300 H / 2    – ಕೆ.ಆರ್.ಪುರಂ
ಬೆಳಿಗ್ಗೆ 10.30     – 300 C / 4      – ಕಲ್ಯಾಣ್ ನಗರ
ಮಧ್ಯಾಹ್ನ 12.30 – 300 H / 3   – ಕೆ.ಆರ್.ಪುರಂ
ಮಧ್ಯಾಹ್ನ 1.30   – 300 H / 4   – ಕೆ.ಆರ್.ಪುರಂ
ರಾತ್ರಿ 9.30       – 300 H / 7   – ಕೆ.ಆರ್.ಪುರಂ
ರಾತ್ರಿ 10.30     – 300 H/ 6   – ಕೆ.ಆರ್.ಪುರಂ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap