ಪೇಶಾವರ :
ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಮದರಸಾದಲ್ಲಿ ಕುರಾನ್ ಬೋಧನೆಯ ವೇಳೆ ಈ ದಾಳಿ ನಡೆದಿದೆ. ತರಗತಿಯಲ್ಲಿ 60 ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ಪೊಲೀಸ್ ಅಧಿಕಾರಿ ವಘಾರ್ ಅಸೀಮ್ ಅವರು ತಿಳಿಸಿದ್ದಾರೆ.
#Blast on Ring Road #Peshawar in a madrassa. More than 20 children injured. pic.twitter.com/xw6aLn8ZVe
— !بول کے لب (@BolKeLub) October 27, 2020
‘ಬಾಂಬ್ ಸ್ಫೋಟಕ್ಕೂ ಮೊದಲು ವ್ಯಕ್ತಿಯೊಬ್ಬ ಚೀಲವೊಂದನ್ನು ಹೊತ್ತುಕೊಂಡು ಕುರಾನ್ ತರಗತಿ ನಡೆಯುತ್ತಿದ್ದ ಮದರಸಾದ ಸಭಾಂಗಣಕ್ಕೆ ಬಂದಿದ್ದಾನೆ. ವಾಪಸ್ ಹೋಗುವಾಗ ಆ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ, ಈವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಯು ಹೊತ್ತಿಲ್ಲ’ ಎಂದು ಅವರು ಹೇಳಿದರು.
ಸ್ಫೋಟ ಸಂಭವಿಸಿದ ಸ್ಥಳದಲ್ಲಿ 7 ಮೃತ ದೇಹಗಳು ಪತ್ತೆಯಾಗಿವೆ. ಮೃತಪಟ್ಟವರೆಲ್ಲರೂ 20 ರಿಂದ 40 ವರ್ಷದೊಳಗಿನ ಪುರುಷರು ಎಂದು ಸ್ಥಳೀಯ ಆಸ್ಪತ್ರೆಯ ವಕ್ತಾರ ಮೊಹಮ್ಮದ್ ವಸೀಮ್ ಖಾನ್ ಮಾಹಿತಿ ನೀಡಿದರು.
70ಕ್ಕೂ ಹೆಚ್ಚು ಜನರು ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕರು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ