ಮಂಗಳೂರು :
ಕಸ್ಟಂ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನದ ಪೇಸ್ಟ್ ಸಾಗಾಟ ಮಾಡುತ್ತಿದ್ದ 10.14 ಲಕ್ಷ ರೂ. ಮೌಲ್ಯದ 314ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಪ್ರತ್ಯೇಕ ಆರೋಪಿಗಳನ್ನು ಬಂಧಿಸಿದ್ದಾರೆ.
ಭಟ್ಕಳ ಮೂಲದ ಫಾತಿಮಾ ಮತ್ತು ಸಬೀನಾ ಮೊದಲ ಪ್ರಕರಣದ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇಬ್ಬರೂ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ 4.53 ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನ ದೊರೆತಿದೆ
ಇನ್ನೊಂದು ಪ್ರಕರಣದಲ್ಲಿ ದುಬಾಯಿನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಕಾಸರಗೋಡು ನಿವಾಸಿ ಅಬೂಬಕ್ಕರ್ ಮಹಮದ್ ಎಂಬಾತನ ಒಳ ಚಡ್ಡಿಯಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದ 5.63 ಲಕ್ಷ ರೂ. ಮೌಲ್ಯದ 174 ಗ್ರಾಂ. ಚಿನ್ನ ಪತ್ತೆಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 27,56,436 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಲಾಗಿದೆ. ರಾಸಾಯಿಕ ಬಳಸಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ