30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಬಸ್ : ಐವರ ದುರ್ಮರಣ!!!

ಮುಂಬೈ​ : 

     ಸುಮಾರು 30 ರಿಂದ 40 ಅಡಿ ಆಳದ ಕಣಿವೆಗೆ ಬಸ್ ಉರುಳಿಬಿದ್ದ ಪರಿಣಾಮ ಐವರು ಸಾವಿಗೀಡಾಗಿರುವ ಘಟನೆ  ಮಹಾರಾಷ್ಟ್ರದ ನಂದುರ್​​ಬಾರ್ ಜಿಲ್ಲೆಯ ಕಾಮ್​ಚೌಂದರ್​ ಗ್ರಾಮದ ಬಳಿ ನಡೆದಿದೆ.

     ‘ಮಲ್ಕಾಪುರದಿಂದ ಗುಜರಾತ್‌ನ ಸೂರತ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ಇನ್ನೊಂದು ಬಸ್​​ ಡಿಕ್ಕಿ ಹೊಡೆದ ಪರಿಣಾಮ ಮುಂಜಾನೆ 3.15 ರ ಸುಮಾರಿಗೆ ಕೊಂಡೈಬರಿ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

     ಅಪಘಾತದಲ್ಲಿ ಬಸ್​ ಚಾಲಕ-ಕ್ಲೀನರ್​ ಸೇರಿದಂತೆ 5 ಮಂದಿ ಅಸುನೀಗಿದ್ದು, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link