ನವದೆಹಲಿ :
ಭಾರತಕ್ಕೆ ಈ ವರೆಗೂ 11 ರಫೇಲ್ ಯುದ್ಧ ವಿಮಾನಗಳು ಆಗಮಿಸಿದ್ದು, ಮುಂದಿನ ವರ್ಷ ಏಪ್ರಿಲ್ ವೇಳೆಗೆ ಎಲ್ಲಾ ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಯಲ್ಲಿರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಈಗಾಗಲೇ ದೇಶಕ್ಕೆ 11 ರಫೇಲ್ ಯುದ್ಧ ವಿಮಾನಗಳು ಬಂದಿದ್ದು, ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ಸಂಖ್ಯೆ 17ಕ್ಕೆ ಏರಿಕೆಯಾಗಲಿದೆ. ಸಂಪೂರ್ಣ 36 ರಫೇಲ್ ಜೆಟ್ ಗಳು 2022ರ ಏಪ್ರಿಲ್ ಒಳಗಾಗಿ ಭಾರತ ತಲುಪಲಿವೆ. ಯುದ್ಧ ವಿಮಾನ ಆಗಮನದ ವಿಚಾರದಲ್ಲಿ ಆಲಸ್ಯ ತೋರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
4 ವರ್ಷಗಳ ಹಿಂದೆ ಭಾರತವು, ಫ್ರಾನ್ಸ್ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಮೂರು ಬ್ಯಾಚ್ಗಳಲ್ಲಿ ಈವರೆಗೆ ಒಟ್ಟು 11 ಜೆಟ್ಗಳು ಬಂದಿವೆ. ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಗಳಿಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
