ನವದೆಹಲಿ:
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್‌ಎನ್‌ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್(ಎಂಟಿಎನ್ ಎಲ್) ಸೇವೆಗಳನ್ನು ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿ ವರ್ಷ ನಷ್ಟದಲ್ಲೇ ಸೇವೆ ನೀಡುತ್ತಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳ ಪುನಚ್ಛೇತನಕ್ಕೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದ್ದು, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಬಿಎಸ್ ಎನ್ ಎಲ್ ಮತ್ತು ಎಂಟಿಎನ್‌ಎಲ್ ಸೇವೆಗಳನ್ನು ಬಳಸಬೇಕೆಂದು ದೂರಸಂಪರ್ಕ ಇಲಾಖೆ ಲಿಖಿತ ಆದೇಶ ಹೊರಡಿಸಿದೆ.
ಖಾಸಗಿ ದೂರ ಸಂಪರ್ಕ ಕಂಪನಿಗಳ ಸರಿಸಮನಾಗಿ ಬೆಳೆಯಲು ಮೊದಲ ಹಂತದ ಈ ನಿರ್ಧಾರ ಸಹಕಾರಿಯಾಗಲಿದ್ದು, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕಡ್ಡಾಯ ಬಳಕೆಗೆ ಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳಿಗೂ ಟಿಪ್ಪಣಿಯೊಂದನ್ನು ರವಾನಿಸಿದೆ. ಇದರ ಅಡಿಯಲ್ಲಿ ಬರುವ ಎಲ್ಲಾ ಕಚೇರಿಗಳು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸೇವೆಯನ್ನೇ ಬಳಸಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
