ಎರಡನೇ ಹಂತದ ಮತದಾನ : 11ಗಂಟೆಯ ವೇಳೆಗೆ 28.5% ದಾಖಲು
ರಾಂಚಿ:
ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು ಗುಮ್ಲಾದ ಸಿಸೈ ಕ್ಷೇತ್ರದಲ್ಲಿ ಮತದಾನವನ್ನು ಭದ್ರತಾ ಹಿತದೃಷ್ಠಿಯಿಂದ ಸ್ಥಗಿತಗೊಳಿಸಲಾಗಿದೆ .ಇದಕ್ಕೆ ಕಾರಣ ಭದ್ರತಾ ಪಡೆಯಿಂದ ಶಸ್ತಾಸ್ತ್ರಗಳನ್ನು ಕಸಿಯಲು ಯತ್ನಿಸಿ ಓರ್ವ ವ್ಯಕ್ತಿ ಸಾವನ್ನಪಿ ಇಬ್ಬರು ಗಾಯಗೊಂಡಿರು ಘಟನೆ ಎಂದು ತಿಳಿದು ಬಂದಿದೆ.
ಸಿಸೈ ಕ್ಷೇತ್ರದ ಬೂತ್ ಸಂಖ್ಯೆ 36ರಲ್ಲಿ ಭದ್ರತಾ ಪಡೆ ಯೋಧನ ಕೈಯಿಂದ ಬಂದೂಕು ಕಸಿಯಲು ಯತ್ನಿಸಿದ ವ್ಯಕ್ತಿಯ ಮೇಲೆ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುರಾರಿ ಲಾಲ್ ಮೀನಾ ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಮೀನಾ ತಿಳಿಸಿದ್ದಾರೆ. ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇಕಡಾ 12.35ರಷ್ಟು ಮತದಾನವಾಗಿದೆ.