ಚಂದ್ರನ ಕಕ್ಷೆಗೆ ಪ್ರವೇಶಿಸಿದ ಚಂದ್ರಯಾನ-2 ಗಗನನೌಕೆ!

ನವದೆಹಲಿ:

       ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 2ರ ಗಗನನೌಕೆ ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿದೆ. ಈವರೆಗೆ ಭೂಕಕ್ಷೆಯಲ್ಲಿದ್ದ ನೌಕೆಯನ್ನು ಇಂದು ಬೆಳಿಗ್ಗೆ 9 ಗಂಟೆ 2ನಿಮಿಷಕ್ಕೆ ಚಂದ್ರನ ಕಕ್ಷೆಗೆ ಪ್ರವೇಶಿಸಿಸಲಾಗಿದೆ.

      ಚಂದ್ರಯಾನ- 2 ನೌಕೆಯ ಯಶಸ್ವಿ ಚಂದ್ರನ ಕಕ್ಷೆಗೆ ಸೇರ್ಪಡೆ ಕಾರ್ಯಾಚರಣೆಗೆ ಕೇಂದ್ರದ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್​ ಪ್ರಸಾದ್​ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ಇಸ್ರೋ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link