ದೆಹಲಿ :
ನಿನ್ನೆ ರಾತ್ರಿ ಬಂಧನಕ್ಕೆ ಒಳಗಾದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಹೆಚ್ಚಿನ ವಿಚಾರಣೆಗೆ 5 ದಿನಗಳ ಕಸ್ಡಡಿಗೆ ಒಪ್ಪಿಸಬೇಕೆಂದು ಸಿಬಿಐ ಪರ ವಕೀಲರು ಮನವಿ ಮಾಡಿದ್ದಾರೆ.
ಐಎನ್‌ಎಕ್ಸ್ ಮೀಡಿಯಾ ಬಹುಕೋಟಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂರನ್ನು ಅಧಿಕಾರಿಗಳು ವಿಶೇಷ ಸಿಬಿಐ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.
ಚಿದಂಬರಂ ತನಿಖೆಗೆ ಯಾವುದೇ ರೀತಿಯಲ್ಲೂ ಸಹಕಾರ ನೀಡುತ್ತಿಲ್ಲ. ಐಎನ್‌ಎಕ್ಸ್ ಮೀಡಿಯಾ ಹೌಸ್ ಹಗರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಕಸ್ಟಡಿಗೆ ಪಡೆಯುವುದು ಅವಶ್ಯ. ಇದರಿಂದ ಪರಿಣಾಮಕಾರಿ ತನಿಖೆ ನಡೆಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಆದರೆ, ಚಿದಂಬರಂ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಐದು ದಿನ ವಶಕ್ಕೆ ವಿರೋಧ ವ್ಯಕ್ತಪಡಿಸಿದರು.
ಐಎನ್ ಎಕ್ಸ್ ಹಗರಣ ಗಂಭೀರವಾದ ಪ್ರಕರಣವಾಗಿದೆ. ಇದರಲ್ಲಿ ಭಾರೀ ಮೊತ್ತದ ಹಣದ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕಾಗಿದೆ ಎಂದು ಸಿಬಿಐ ವಾದಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
