ದೆಹಲಿ:
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು ನ್ಯಾಯಾಲಯದ 22 ನ್ಯಾಯಾಧೀಶರಿಗೆ ಪತ್ರ ಬರೆದು, ಅಕ್ಟೋಬರ್ 11, 2018 ರಂದು ರಂಜನ್ ಗೊಗೊಯ್ ಅವರು ನನ್ನನ್ನು ಬಲವಂತವಾಗಿ ಅಪ್ಪಿಕೊಂಡು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ. ಮಹಿಳೆ ಬರೆದ ಪತ್ರವನ್ನು ಸ್ಕ್ರೋಲ್, ದಿ ವೈರ್, ಕ್ಯಾರವನ್ ವೆಬ್‍ಸೈಟ್‍ಗಳು ಪ್ರಕಟಿಸಿವೆ.
ಈ ಹಿನ್ನೆಲೆ ಇಂದು ಸುಪ್ರೀಂ ಕೋರ್ಟ್ ಪೀಠ, ವಿಶೇಷ ವಿಚಾರಣೆ ನಡೆಸಿತು. ಸಾರ್ವಜನಿಕ ಮಹತ್ವ ಹೊಂದಿರೋ ವಿಷಯವಾಗಿ ಇಂದು, ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ, ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠದಿಂದ ಸ್ಪೆಷಲ್ ಹಿಯರಿಂಗ್ ನಡೆಯಲಿದೆ ಎಂದು ಕೋರ್ಟ್ ನೋಟಿಸ್ನಲ್ಲಿ ತಿಳಿಸಿತ್ತು.
ಈ ಅಫಿಡವಿಟ್ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ತುರ್ತು ವಿಚಾರಣೆ ವೇಳೆ, ತನ್ನ ವಿರುದ್ಧ ಸಂಪೂರ್ಣ ಸುಳ್ಳು ಆರೋಪ ಮಾಡಲಾಗಿದೆ. ಇದು ಸುಳ್ಳು ಹಾಗೂ ಅಶ್ಲೀಲವಾಗಿದೆ. ನನ್ನ ಬ್ಯಾಂಕ್ ಖಾತೆಯಲ್ಲಿ 6.8 ಲಕ್ಷ ರೂ. ಇದ್ದು, 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನನಗೆ ಸಿಕ್ಕಿದ ಪ್ರಶಸ್ತಿ ಇದು ಎಂದು ಹೇಳಿ ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ರಂಜನ್ ಗೊಗೋಯ್ ಅವರು ತಳ್ಳಿ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ