ಅಹಮದಾಬಾದ್:
ಕೊರೊನಾ ವೈರಸ್‌ಗೆ ದೇಶದಲ್ಲಿ ಮೊದಲ ರಾಜಕಾರಣಿಯೊಬ್ಬರು ಗುಜರಾತ್ನಲ್ಲಿ ಬಲಿಯಾಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಹಮದಾಬಾದ್ ಕಾರ್ಪೋರೇಟರ್ ಬದ್ರುದ್ದೀನ್ ಶೇಖ್ ಅವರು ಕೊವೀಡ್–19 ನಿಂದಾಗಿ ಭಾನುವಾರ ಮೃತಪಟ್ಟವರು.
ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಅನೇಕ ಜನರು ತಿನ್ನಲು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಆಹಾರ ವಿತರಿಸಲು ಹೋಗಿದ್ದ ಬದ್ರುದ್ದೀನ್ ಶೇಖ್ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿತ್ತು. ಅವರನ್ನು ನಗರದ ಎಸ್‌ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಈ ಮೂಲಕ ದೇಶದಲ್ಲಿ ಕೊರೋನಾಗೆ ಬಲಿಯಾದ ಮೊದಲ ರಾಜಕಾರಣಿ ಬದ್ರುದ್ದೀನ್ ಶೇಖ್ ಆಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಖಚಿತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
