ಹೊಸದಿಲ್ಲಿ:
ಕಾಂಗ್ರೆಸ್ ಐಟಿ ವಿಭಾಗದ ಮುಖ್ಯಸ್ಥೆ, ಕನ್ನಡ ಚಿತ್ರ ನಟಿ ರಮ್ಯಾ ಮೋದಿಯನ್ನು ಅಣುಕಿಸಲು ಹೋಗಿ ತಾನೇ ಟ್ರೋಲ್ ಆಗಿದ್ದು, ಮತ್ತೊಮ್ಮೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಂಗ್ಲ ಭಾಷೆಯ ಹಾರರ್ ಸಿದಿ ಶೈನಿಂಗ್ ನ ತುಣುಕೊಂದನ್ನು ಎಡಿಟ್ ಮಾಡಿ, ಅದನ್ನು ನೋಟ್ ಬ್ಯಾನ್ ಗೆ ಹೋಲಿಕೆ ಮಾಡಿದ್ದಾರೆ. ಸಿನಿಮಾದಲ್ಲಿ ಭಯ ಬೀಳುವ ಮಗುವೊಂದು ಓಡಿ ಹೋಗುತ್ತಿರಬೇಕಾದರೆ, ದೆವ್ವವನ್ನು ಎದುರಾಗುವ ದೃಶ್ಯವಾಗಿದೆ. ಆದರೆ ಶೇರ್ ಮಾಡಿದ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ದೆವ್ವದ ಬದಲಾಗಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡುತ್ತಿರುವುದನ್ನು ಸೇರಿಸಲಾಗಿದೆ. ಸದ್ಯ ಇದು ಸಾಮಾಜಿಕ ತಾಣದಲ್ಲಿ ಭಾರಿ ಸುದ್ದಿ ಮಾಡಿದೆ.
Feat.@narendramodi in #Demonetisation flashback pic.twitter.com/WhFWrCcx9C
— Divya Spandana/Ramya (@divyaspandana) January 16, 2019
ಈ ಸಂಬಂಧ ರಮ್ಯಾರನ್ನು ಕೆಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡರೆ, ಮತ್ತೆ ಕೆಲವರು ರಮ್ಯಾಗೆ ತಿರುಗು ಬಾಣದ ಕಾಮೆಂಟ್‌ಗಳನ್ನು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ