ನವದೆಹಲಿ :
ದೇಶದಲ್ಲಿ ಮಾರಕ ಕೊರೊನಾ ಸೋಂಕು ಜನತೆಯನ್ನು ತಲ್ಲಣಗೊಳಿಸಿದ್ದು ಏತನ್ಮಧ್ಯೆ, ಭಾರತೀಯ ಸೇನೆಯಲ್ಲಿ ಯೋಧನಿಗೆ ಮಾರಕ ಕೋವಿಡ್-19 ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಸೇನಾಪಡೆಯ ಯೋಧರನ್ನು ತಪಾಸಣೆ ನಡೆಸಿದ್ದು, ಈ ಪೈಕಿ ಒಬ್ಬ ಯೋಧನಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಆತ ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದು, ಜಮ್ಮು ಕಾಶ್ಮೀರದ ಲೇಹ್ ನಲ್ಲಿ ತನ್ನ ಮನೆಯಲ್ಲಿ ನೆಲೆಸಿದ್ದ. ಇತ್ತೀಚೆಗಷ್ಟೇ ಆತನ ತಂದೆ ಇರಾನ್ ನಿಂದ ವಾಪಾಸ್ ಆಗಿದ್ದು, ಮಾರಕ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಯೋಧನೂ ಕೂಡ ಅವರ ಮನೆಯಲ್ಲೇ ಇದ್ದ ಕಾರಣ ಆತನಿಗೂ ಮಾರಕ ಸೋಂಕು ತಾಕಿದ್ದು, ತಪಾಸಣೆ ವೇಳೆ ದೃಢಪಟ್ಟಿದೆ. ಸದ್ಯ ಯೋಧನ ಮೇಲೆ ನಿಗಾ ಇಟ್ಟಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಸೇನಾಪಡೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 75 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಈವರೆಗೆ ಸೋಂಕು ಪೀಡಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ