ನವದೆಹಲಿ :
ದೇಶದೆಲ್ಲೆಡೆ ಕೊರೊನಾ ವೈರಸ್ ಹರಡುತ್ತೀರುವ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಸರ್ಕಾರಗಳ ಸಲಹೆಯ ಪಿವಿಆರ್ ಚಿತ್ರ ಮಂದಿರಗಳನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಲಾಗಿದೆ.
ದೇಶದೆಲ್ಲೆಡೆ ಕೊರೊನಾ ಭೀತಿ ಮನೆ ಮಾಡಿದ್ದು, ವೈರಸ್ ಹರಡದಂತೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳುತ್ತಿವೆ. ಈ ಬಗ್ಗೆ ಗುರುವಾರ ಪಿವಿಆರ್ ಮುಖ್ಯಸ್ಥರು ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದ್ದು, ಕೇರಳ, ದೆಹಲಿ, ಜಮ್ಮ ಮತ್ತು ಕಾಶ್ಮೀರ ಸರ್ಕಾರದ ಸಲಹೆಯ ಮೇರೆಗೆ ನಮ್ಮ ಪಿವಿಆರ್ ಸಿನಿಮಾವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸುತ್ತೇವೆ. ಕೋವಿಡ್ 19 ಭೀತಿ ಇರುವುದಿಂದ ಸರ್ಕಾರದ ಮನವಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ.
ಪಿವಿಆರ್ ಸಿನಿಮಾಕ್ಕೆ ಬರುವ ಪ್ರೇಕ್ಷಕರ ಕಾಳಜಿಯನ್ನು ಮತ್ತು ಸರ್ಕಾದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಪಿವಿಆರ್ ತಿಳಿಸಿದೆ. ಅಲ್ಲದೆ ಮುಂದಿನ ಏಪ್ರಿಲ್ 1ರಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿಯೂ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ