ದೇಶೀಯ ಕಂಪೆನಿಗಳ ಕಾರ್ಪೋರೇಟ್ ತೆರಿಗೆ ಶೇ.22 ಕ್ಕೆ ಇಳಿಕೆ!!

ಗೋವಾ:

     ದೇಶಿಯ ಸಂಸ್ಥೆಗಳಿಗೆ ವಿಧಿಸುವ ಕಾರ್ಪೋರೇಟ್​ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

       ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ 37ನೇ ಜಿಎಸ್​ಟಿ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್​, “ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ. ದೇಶಿಯ ಸಂಸ್ಥೆಗಳಿಗೆ ವಿಧಿಸುವ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡಲಾಗಿದೆ. ಈ ಕ್ರಮದಿಂದ ವರ್ಷಕ್ಕೆ ಸರ್ಕಾರಕ್ಕೆ ಬರುವ ತೆರಿಗೆಯಲ್ಲಿ 1.45 ಲಕ್ಷ ಕೋಟಿ ರೂ. ಕಡಿತಗೊಳ್ಳುವ ಸಾಧ್ಯತೆ ಇದೆ,” ಎಂದರು. ಶೇ.22 ತೆರಿಗೆಯ ಮೇಲೆ ಸೆಸ್​ ಸೇರಿದರೆ ದೇಶಿಯ ಸಂಸ್ಥೆಗಳು ಶೇ.25.17 ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್ 1ರಿಂದ ಹೊಸ ತೆರಿಗೆ ದರ ಅನ್ವಯವಾಗಲಿದೆ ದೇಶೀಯ ಕಂಪೆನಿಗಳಿಗೆ ಅನ್ವಯವಾಗಲಿದೆ ಎಂದು ವಿತ್ತಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

       ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ದೇಶೀಯ ಕಂಪೆನಿಗಳು ಯಾವುದೇ ಪ್ರೋತ್ಸಾಹ ಧನ ಅಥವಾ ರಿಯಾಯಿತಿ ಪಡೆದಿರದಿದ್ದರೆ ಶೇಕಡಾ 22ರಷ್ಟು ಕಾರ್ಪೋರೇಟ್ ತೆರಿಗೆ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಮತ್ತು ಹಣಕಾಸು ಕಾಯ್ದೆಯಲ್ಲಿನ ಬದಲಾವಣೆಯನ್ನು ಸರ್ಕಾರ ವಿಧೇಯಕ ಮೂಲಕ ತರಲಿದೆ.

      ಶೇಕಡಾ 22ರಷ್ಟು ಆದಾಯ ತೆರಿಗೆ ಕಡಿತವನ್ನು ಬಯಸುವ ಕಂಪೆನಿಗಳು ಕನಿಷ್ಠ ಪರ್ಯಾಯ ತೆರಿಗೆ(ಮ್ಯಾಟ್) ಕಟ್ಟಬೇಕಾಗಿಲ್ಲ. ಅಕ್ಟೋಬರ್ 1ರ ನಂತರ ಸೇರಲ್ಪಟ್ಟ ಹೊಸ ದೇಶೀಯ ಉತ್ಪಾದನಾ ಕಂಪೆನಿಗಳು ಯಾವುದೇ ಪ್ರೋತ್ಸಾಹ ಧನವಿಲ್ಲದೆ ಆದಾಯ ತೆರಿಗೆಯನ್ನು ಶೇಕಡಾ 15ರ ದರದಲ್ಲಿ ಪಾವತಿಸಬಹುದು.

      ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಕಡಿತ ಘೋಷಿಸಿದ ನಂತರರ ಮಾರುಕಟ್ಟೆಗಳು ತಕ್ಷಣವೇ ಏರಿಕೆ ಕಂಡವು. ಸೆನ್ಸೆಕ್ಸ್ 1,600 ಪಾಯಿಂಟ್‌ ಏರಿಕೆ ಕಂಡರೆ, ನಿಫ್ಟಿ 11000 ಅಂಕಗಳಿಗಿಂತ ಹೆಚ್ಚಾಗಿದೆ. ಈ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap