‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಬೀಸ್ಟ್​’ಗೆ ಸಿಗಲಿಲ್ಲ ಸ್ಕ್ರೀನ್​; ನಿರ್ಮಾಪಕನ ಅಸಮಾಧಾನ?

ಮಲ್ಟಿಪ್ಲೆಕ್ಸ್​ಗಳಲ್ಲಿ ‘ಕೆಜಿಎಫ್​ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಇದರಿಂದ ‘ಬೀಸ್ಟ್​’ ಚಿತ್ರಕ್ಕೆ ಐಮ್ಯಾಕ್ಸ್​ ಪರದೆ​ ಸಿಕ್ಕಿಲ್ಲ ಎಂದು ವರದಿ ಆಗಿದೆ.‘ಕೆಜಿಎಫ್’ ಚಿತ್ರದ KGF ಎದುರು ‘ಝೀರೋ’ ಚಿತ್ರ ಬಂದಾಗ ಕನ್ನಡದ ಚಿತ್ರವೇ ಗೆದ್ದು ಬೀಗಿತ್ತು.

ಈಬಾರಿ, KGF 2 ಚಿತ್ರದ ಎದುರು ಬೇರೆ ಭಾಷೆಯ ಚಿತ್ರಗಳು ತೆರೆಗೆ ಬರುವಾಗ ಕೆಲವರು ಬುದ್ಧಿವಾದ ಹೇಳಿದ್ದರು. ಹಿಂದಿಯ ‘ಜೆರ್ಸಿ’ ತಂಡದವರು  ಈ ಕಿವಿಮಾತನ್ನು ಸ್ವೀಕರಿಸಿ, ಸಿನಿಮಾ ರಿಲೀಸ್ ದಿನಾಂಕವನ್ನು ಒಂದು ವಾರ ಮುಂದೂಡಿದರು. ಆದರೆ, ‘ಬೀಸ್ಟ್​’ ಚಿತ್ರದವರು  ‘ಕೆಜಿಎಫ್ 2’ ಜತೆ ಸ್ಪರ್ಧೆಗೆ ಇಳಿದರು. ಈಗ ಚಿತ್ರಮಂದಿರ ಸಿಗದೆ ಒದ್ದಾಡುತ್ತಿದ್ದಾರೆ.

ಯುದ್ಧದ ಮಧ್ಯೆಯೇ ರಷ್ಯಾದಿಂದ ಸಿಮ್ಯುಲೇಟರ್​ ಖರೀದಿಸಿದ ಭಾರತ

ಮಲ್ಟಿಪ್ಲೆಕ್ಸ್​ನ ಐಮ್ಯಾಕ್ಸ್​ ಪರದೆಗಳಲ್ಲೂ ‘ಕೆಜಿಎಫ್ 2’ ಪ್ರದರ್ಶನ ಕಾಣುತ್ತಿದೆ. ಈ ಪರದೆ ಸಾಮಾನ್ಯ ಥಿಯೇಟರ್ ಪರದೆಗಿಂತ ದೊಡ್ಡದಾಗಿರುತ್ತದೆ. ಪ್ರಾಜೆಕ್ಟರ್​ ಗುಣಮಟ್ಟ ಹೆಚ್ಚಿರುತ್ತದೆ. ಸೌಂಡ್ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ. ಇದರಿಂದ ಸಿನಿಮಾ ಎಫೆಕ್ಟ್ ಹೆಚ್ಚಿರುತ್ತದೆ. ಇನ್ನು, ಐಮ್ಯಾಕ್ಸ್ ಸಿನಿಮಾ ಫಾರ್ಮ್ಯಾಟ್ ಕೂಡ ಬೇರೆಯದೇ ಇರುತ್ತದೆ. ಈ ಪರದೆಯನ್ನು ಪಡೆಯಲು ‘ಬೀಸ್ಟ್’ ವಿಫಲವಾಗಿದೆ.

ಐಮ್ಯಾಕ್ಸ್ ಫಾರ್ಮ್ಯಾಟ್ ಚಿತ್ರಗಳು ಇಲ್ಲದಾಗ ಸಾಮಾನ್ಯ ಫಾರ್ಮ್ಯಾಟ್​ ಚಿತ್ರವನ್ನೇ ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ‘ಬೀಸ್ಟ್’ ಐಮ್ಯಾಕ್ಸ್ ಸಿನಿಮಾ ಅಲ್ಲ. ಆದಾಗ್ಯೂ, ಈ ಐಮ್ಯಾಕ್ಸ್ ಪರದೆ​ ಪಡೆದು ಸಿನಿಮಾ ಪ್ರದರ್ಶಿಸಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ, ‘ಕೆಜಿಎಫ್ 2’ ಐಮ್ಯಾಕ್ಸ್​ ಅವತರಣಿಕೆಯಲ್ಲೂ ರಿಲೀಸ್ ಆಗಿದೆ.

ಕಳಸಾ- ಬಂಡೂರಿ ಕಾಮಗಾರಿ ಶೀಘ್ರ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈ ಚಿತ್ರ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್​ಗಳು ‘ಕೆಜಿಎಫ್​ 2’ಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ‘ಬೀಸ್ಟ್​’ ಚಿತ್ರಕ್ಕೆ ಐಮ್ಯಾಕ್ಸ್​ ಪರದೆ​ ಸಿಕ್ಕಿಲ್ಲ ಎಂದು ವರದಿ ಆಗಿದೆ. ಈ ವಿಚಾರ ‘ಬೀಸ್ಟ್’ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಕನಿಷ್ಠ ಒಂದು ಸ್ಕ್ರೀನ್​ ಆದರೂ ಬೀಸ್ಟ್​ಗೆ ನೀಡಬೇಕಿತ್ತು ಎನ್ನುವ ಅಭಿಪ್ರಾಯ ನಿರ್ಮಾಪಕರ ಕಡೆಯಿಂದ ಬಂದಿದೆ ಎನ್ನಲಾಗಿದೆ.

‘ಕೆಜಿಎಫ್ 2’ ಕನ್ನಡದ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ. ಈ ಪರದೆಗಳ ಟಿಕೆಟ್ ದರ ಸಾಮಾನ್ಯ ಚಿತ್ರಮಂದಿರಗಳ ಟಿಕೆಟ್​ ದರಕ್ಕಿಂತ ಹೆಚ್ಚಿರುತ್ತದೆ. ಸದ್ಯ, ಬೆಂಗಳೂರಿನಲ್ಲಿ ‘ಕೆಜಿಎಫ್ 2’ ಐಮ್ಯಾಕ್ಸ್​ ಟಿಕೆಟ್​ ದರ 850 ರೂಪಾಯಿ ಆಸುಪಾಸಿನಲ್ಲಿದೆ.

ಎಚ್.ಕೆ ಕುಮಾರಸ್ವಾಮಿಗೆ ಗೇಟ್ ಪಾಸ್: ಸಿಎಂ ಇಬ್ರಾಹಿಂ ಜೆಡಿಎಸ್ ನೂತನ ಅಧ್ಯಕ್ಷ!

ತಮಿಳುನಾಡಿನ ಹಲವು ಥಿಯೇಟರ್​ಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ. ಕೆಲವು ಕಡೆಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಚಿತ್ರಮಂದಿರ ಫುಲ್ ಆದ ಕಾರಣಕ್ಕೆ ಖಾಲಿ ಇರುವ ಜಾಗದಲ್ಲಿ ಹೆಚ್ಚುವರಿ ಚೇರ್​ಗಳನ್ನು ಹಾಕಿ ಸಿನಿಮಾ ತೋರಿಸಲಾಗಿದೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಫ್ಯಾನ್ಸ್ ಥಿಯೇಟರ್​ನ ನೆಲದ ಮೇಲೆ ಕೂತು ಸಿನಿಮಾ ನೋಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ನಿಂತು ‘ಕೆಜಿಎಫ್ 2’ ವೀಕ್ಷಣೆ ಮಾಡಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap