ದೇಶದಲ್ಲಿ ಒಂದೇ ದಿನ 1092 ಕೊರೊನಾ ಸೋಂಕಿತರ ಸಾವು!!

ನವದೆಹಲಿ :

      ದೇಶದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ಗರಿಷ್ಠ ಸಂಖ್ಯೆಯ (1,092) ಸೋಂಕಿತರು ಮೃತಪಟ್ಟಿದ್ದಾರೆ. 

      ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 64,531ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. 1092 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

       ಈ ಮೂಲಕ ಭಾರತದಲ್ಲಿ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 27,67,274 ಕ್ಕೆ ಏರಿಕೆಯಾಗಿದೆ.

      ಇದರಲ್ಲಿ ಸದ್ಯ 6,76,514 ಜನರು ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟಾರೆ 20,37,871 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

      ಕಳೆದ ಒಂದು ದಿನದಲ್ಲಿ 1092 ಸೋಂಕಿತರು ಮೃತಪಟ್ಟಿದ್ದರೆ, 60,091 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿವರೆಗೂ ದೇಶದಲ್ಲಿ ಸಾವನ್ನಪ್ಪಿರೋ ಸೋಂಕಿತರ ಸಂಖ್ಯೆ 52,889ಕ್ಕೆ ಏರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap