ಬೆಂಗಳೂರು:
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾನ 3 ಗಂಟೆಗೆ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್ಸೈಟ್ cbseresults.nic.in ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ.
ಮೇ.5 ರಂದೇ ಫಲಿತಾಂಶ ನೀಡಲಾಗುವುದು ಎಂದು ಈ ಹಿಂದೆಯೇ ಸಿಬಿಎಸ್ಇ ಮಂಡಳಿ ತಿಳಿಸಿತ್ತಾದರೂ ಕೆಲವು ತಾಂತ್ರಿಕ ತೊಂದರೆಗಳಿಂದ ಫಲಿತಾಂಶ ಹೊರಬಿದ್ದರಲಿಲ್ಲ. ಆದರೆ ಇಂದು ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತವಾಗಿದೆ.
2019ರ ಫೆ. 2ರಿಂದ ಮಾ. 29ರ ವರೆಗೆ ನಡೆದ ಹತ್ತನೇ ತರಗತಿ ಪರೀಕ್ಷೆಗೆ ಸುಮಾರು 27 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ನೋಂದಣಿ ಮಾಡಿಕೊಂಡಿದ್ದರು. ಎಲ್ಲ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ಮುಗಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
