ಭಾರತದ ಬ್ರಹ್ಮೋಸ್ ಕ್ಷಿಪಣಿ ಮಾಹಿತಿ ಪಾಕ್ ಗೆ ಲೀಕ್ !!!?

0
339

ನವದೆಹಲಿ;  

      ಯುದ್ಧ ತಂತ್ರಜ್ಞಾನದ ವಿಷಯದಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿರುವ ಭಾರತ ಮತ್ತು ರಷ್ಯಾ, ಇದೀಗ ಮಾಹಿತಿ ಸೋರಿಕೆಯ ಭೀತಿ ಎದುರಿಸುತ್ತಿವೆ ಈ ಎರಡೂ ದೇಶಗಳು ಅತೀ ಗೌಪ್ಯವಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ ಪರಮಾಣು ಸಾಮರ್ಥ್ಯದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆಯಾಗಿದೆ ಎಂಬ ಶಂಕೆಯ ಮೇಲೆ ಡಿಆರ್ ಡಿಒ ದ ಉದ್ಯೋಗಿ ನಿಶಾಂತ್ ಅಗರ್ವಾಲ್ ಬಂಧನವಾಗಿದೆ ಆದರೆ ಇಂತಹ ದೇಶದ್ರೋಹದ ಕೆಲಸದಿಂದ  ಭಾರತದ  ರಕ್ಷಣಾತ್ಮಕ ವ್ಯವಸ್ತೆಗಳ ಬಗ್ಗೆ ರಷ್ಯಕ್ಕೆ ಆತಂಕವಾದರು ಅದು ಭಾರತದ ಬಗ್ಗೆ ಇನ್ನೂ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದೆ.

       ಯಾವ ನಿಖರವಾದ ಮಾಹಿತಿ ಸೋರಿಕೆಯಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಇಂತಹ ಸೂಕ್ಷ್ಮ ವಿಚಾರವನ್ನು ಗೌಪ್ಯವಾಗಿ ರಕ್ಷಿಸುವ ಭಾರತದ ಸಾಮರ್ಥ್ಯದ ಬಗ್ಗೆ ರಷ್ಯಾ ಸರ್ಕಾರಕ್ಕೆ ಸಂಪೂರ್ಣ ವಿಶ್ವಾಸವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದೇಶದ ರಕ್ಷಣಾ ವಲಯಕ್ಕೆ ಸಂಬಂಧಪಟ್ಟ ಇಂತಹ ಸೂಕ್ಷ್ಮ ವಿಚಾರಗಳು ಎರಡೂ ದೇಶಗಳಿಗೂ ಭದ್ರತೆ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ ಎಂದು ಮೂಲಗಳು ಹೇಳುತ್ತವೆ.

       ಬ್ರಹ್ಮೋಸ್ ನೌಕಾ ಕ್ಷಿಪಣಿಯನ್ನು ಜಂಟಿಯಾಗಿ ತಯಾರಿಸುವಾಗ ವಸ್ತುಗಳ ಪೂರೈಕೆ ಸಂದರ್ಭದಲ್ಲಿ ಭದ್ರತೆ ಒದಗಿಸಲು ಭಾರತದ ಕಡೆಯಿಂದ ಮನವಿಗಳು ಬಂದರೆ ಅದು ರಷ್ಯಾಗೆ ಖುಷಿಯ ವಿಚಾರವಾಗಿದೆ. ರಕ್ಷಣಾ ಇಲಾಖೆ ಉದ್ಯೋಗಿಯ ಬಂಧನ ಎರಡೂ ದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.

       ರಕ್ಷಣೆ ದೃಷ್ಟಿಯಿಂದ ಉದ್ಯೋಗಿಯನ್ನು ಬಂಧಿಸಿರುವುದು ಭಾರತದ ಭದ್ರತೆಯ ವ್ಯವಸ್ಥೆಯಲ್ಲಿರುವ ಕಠಿಣ ನಿಲುವನ್ನು ತೋರಿಸುತ್ತದೆ. ಈ ಘಟನೆ ನಮ್ಮ ಸಹಭಾಗಿತ್ವ ಕಾರ್ಯತಂತ್ರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ನಂತರ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸುತ್ತದೆ.

       ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಸಮುದ್ರದಲ್ಲಿ ಪ್ರಯಾಣಿಸುವ ಕ್ಷಿಪಣಿ ಎಂದು ಹೇಳಲಾಗುತ್ತಿರುವ ಬ್ರಹ್ಮೋಸ್ ಮಧ್ಯಮ ಶ್ರೇಣಿಯ ರಾಮ್ಜೆಟ್ ಸೂಪರ್ ಸಾನಿಕ್ ನೌಕಾ ಕ್ಷಿಪಣಿಯನ್ನು ರಷ್ಯಾದ ಮಶಿನೋಸ್ಟ್ರೊಯೆನಿಯಾ ಫೆಡರೇಶನ್ ಮತ್ತು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.ಇದಾದ ಮೇಲೆ ಡಿ ಆರ್ ಡಿ ಓ ತನ್ನ ಭದ್ರತಾ ವಲಯವನ್ನು ಇನ್ನಷ್ಟು ಸದ್ರುಢಗಳಿಸಿದೆ ಮತ್ತು ಶಂಕಿತ ಉದ್ಯೋಗಿಯನ್ನು ವಶಕ್ಕೆ ಪಡೆದು ಈಗ ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here