ನವದೆಹಲಿ:
ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ರೈತರು ಪ್ರತಿಭಟನೆಯನ್ನು ಇಂದು ನವದೆಹಲಿಯಲ್ಲಿ ನಡೆಸಿದ್ದಾರೆ. ತಮ್ಮ 9 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ದ ನಡೆಸಿದ ಪ್ರತಿಭಟನೆಯಿಂದಾಗಿ 9 ಬೇಡಿಕೆಗಳಲ್ಲಿ 2 ಬೇಡಿಕೆಗಳನ್ನು ಹೊರತು ಪಡಿಸಿ, ಉಳಿದ 7 ಬೇಡಿಕೆಗಳ ಈಡೇರಿಸುವುದಾಗಿ ಕೇಂದ್ರಸರ್ಕಾರ ಒಪ್ಪಿಗೆ ನೀಡಿದೆ.
ಪ್ರತಿಭಟನೆಯ ನಂತರ ಗೃಹಮಂತ್ರಿ ರಾಜನಾಥಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ ಸಾಲಮನ್ನಾ ಮತ್ತು ಸ್ವಾಮಿನಾಥನ್ ವರದಿ ಜಾರಿಗೆ ಸಮ್ಮತಿ ಬಗ್ಗೆ ಹೊರತು ಪಡಿಸಿ, ಉಳಿದ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಸಭೆಯಲ್ಲಿ ಭಾಗವಹಿಸಿದ್ದ ರೈತರಿಗೆ ಅಭಯ ನೀಡಿದರು,
