ಲಂಡನ್:
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬ ತಮ್ಮ ತಂಡದ ಜೆರ್ಸಿ ಮೇಲೆ ಧೋನಿ ಹೆಸರು ಮುದ್ರಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವದಾದ್ಯಂತ ವಿಶ್ವಕಪ್ ಫಿವರ್ ಹೆಚ್ಚಾಗುತ್ತಿದೆ. ಟೂರ್ನಿಯಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಲೆಕ್ಕಾಚಾರ ಆರಂಭಿಸಿದ್ದಾರೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭಕೋರುತ್ತಿದ್ದಾರೆ.
Thankyou @TPLUS for making my day… ??@msdhoni pic.twitter.com/nsscagDLWw
— Shehzad-Ul-Hassan (@shehzad441) May 23, 2019
ಆದರೆ, ಪಾಕ್ ಮೂಲದ ಶೆಜಾದ್ ಉಲ್ ಹಸನ್ ಎಂಬಾತ ಧೋನಿ ಹೆಸರು ಹಾಗೂ ಲಕ್ಕಿ ನಂಬರ್ ‘7’ ಇರುವ ಜೆರ್ಸಿಯ ಫೋಟೋ ಟ್ವೀಟ್ ಮಾಡಿದ್ದು, ಈ ಮೂಲಕ ಧೋನಿ ಮೇಲಿನ ಪ್ರೀತಿಯನ್ನ ತೋರಿಸಿದ್ದಾರೆ. ಅಭಿಮಾನಿಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
