ಬೆಂಗಳೂರು
ಸಚಿರಾಗಬೇಕೆಂಬ ತಮ್ಮ ಕನಸನ್ನು ಸಿದ್ದರಾಮಯ್ಯ ಈಡೇರಿಸಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಪ್ರಕಟಿಸಿದ್ದಾರೆ.
ನಗರದ ಜೆಟ್ಟಿಗರಹಳ್ಳಿಯಲ್ಲಿ ಕನಕ ಸಮುದಾಯದ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಸಚಿವರಾಗಬೇಕು ಇಲ್ಲವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದ್ದೆ, ತಮ್ಮ ಕನಸನ್ನು ಸಿದ್ದರಾಮಯ್ಯ ಅವರು ನನಸು ಮಾಡಿದ್ದಾರೆ. ಸಚಿವ ಸ್ಥಾನ ದೊರೆತಿರುವುದರಿಂದ ಮುಂದಿನ ಚುನಾವಣಗಳಲ್ಲಿ ಸ್ಪರ್ಧಿಸದೆ ಸಕ್ರೀಯ ರಾಜಕೀಯದಿಂದ ದೂರ ಉಳಿಯುತ್ತೇವೆಂದು ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಯಾವಾಗಲು ನೆನಪಿಸಿಕೊಳ್ಳುವುದಾಗಿ ಹೇಳಿದ ನಾಗರಾಜ್ ಅವರು ರಾಮನ ಮೇಲೆ ಹನುಮಂತನಿಗಿರುವ ನಿಷ್ಠೆಯಂತೆ ಸಿದ್ದರಾಮಯ್ಯನವರಿಗೆ ನಿಷ್ಠರಾಗಿದ್ದೇವೆ. ತಮ್ಮ ಎದೆಯನ್ನು ಬಗೆದರೆ ಸಿದ್ದರಾಮಯ್ಯ ಅವರು ಕಾಣಲಿದ್ದಾರೆ ಎಂದು ಅಭಿಮಾನ ಪ್ರಕಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
