ದಾವಣಗರೆ(ಅ.06):
ಕಳೆದೆರಡು ದಿನಗಳಿಂದ ಮಂಗವೊಂದು ಸ್ಟೇರಿಂಗ್ ಹಿಡಿದು ಬಸ್ ಚಲಾಯಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಪ್ರೇಕ್ಷಕರೂ ಆ ಮಂಗಣ್ಣನ ಡ್ರೈವಿಂಗ್ ನೀಡಿ ಶಹಬ್ಬಾಸ್ ಎಂದಿದ್ದರು. ಆದರೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಸ್ ಚಾಲಕ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಹೌದು ದಾವಣಗರೆ ಡಿಪೋಗೆ ಸೇರಿದ ಬಸ್ ಒಂದರಲ್ಲಿ ಚಾಲಕನೊಂದಿಗೆ ಕುಳಿತುಕೊಂಡ ಕೋತಿ ಚಲಾಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಾಲಕ ಬ್ರೇಕ್ ಮೇಲೆ ನಿಯಂತ್ರಣವಿಟ್ಟುಕೊಂಡಿದ್ದರೂ ಸ್ಟೇರಿಂಗ್ ಮಾತ್ರ ಕೋತಿಯ ಕೈಗೆ ಕೊಟ್ಟಿದ್ದರು. ಕೋತಿ ಯಾವುದೇ ಭಯವಿಲ್ಲದೇ ನೀಟಾಗಿ ಬಸ್ ಚಲಾಯಿಸಿಕೊಂಡು ಹೋಗಿತ್ತು.
ಆದರೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಎಸ್ಆರ್ಟಿಸಿ ಅಧಿಕಾರಿಗಳು ಚಾಲಕನ ವಿರುದ್ಧ ಕ್ರಮ ಜರುಗಿಸಿ ಕೆಲಸದಿಂದ ಅಮಾನತ್ತು ಮಾಡಿದ್ದಾರೆ. ಈ ಬಸ್ ಭರಮಸಾಗರದಿಂದ ಆಲಿಕಲ್ಲುಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತೆನ್ನಲಾಗಿದೆ.








