ಮುಂಬೈ :
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಕೋಸ್ಮಿ-ಕಿಸ್ನೇಲಿ ಅರಣ್ಯಪ್ರದೇಶದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಗಡ್ಚಿರೋಲಿ ಪೊಲೀಸ್ ವಿಭಾಗದ ಸಿ-60 ಕಮಾಂಡೋಗಳು ಅರಣ್ಯದಲ್ಲಿ ಶೋಧ ನಡೆಸುತ್ತಿದ್ದಾಗ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು.
ಪೊಲೀಸರು ಪ್ರತಿದಾಳಿ ನಡೆಸಿ ಸಮರ್ಥವಾಗಿ ನಕ್ಸಲರನ್ನು ಹಿಮ್ಮೆಟ್ಟಿದ್ದರಿಂದ ನಕ್ಸಲೀಯರು ಅಲ್ಲಿಂದ ಕಾಲ್ಕಿತ್ತರು. ಶೋಧ ನಡೆಸಿದಾಗ ಮೂವರು ಮಹಿಳಾ ನಕ್ಸಲರು ಸೇರಿದಂತೆ ಐವರ ಮೃತದೇಹ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇದು ಈ ವರ್ಷ ನಕ್ಸಲರ ವಿರುದ್ಧ ನಡೆದ ಅತಿದೊಡ್ಡ ಕಾರ್ಯಾಚರಣೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ