ದಾವಣಗೆರೆ : ಅಪಘಾತದಲ್ಲಿ ದಂಪತಿಗಳ ದುರ್ಮರಣ!!!

ದಾವಣಗೆರೆ :

      ರಸ್ತೆ ಪಕ್ಕವಿದ್ದ ಕಬ್ಬಿಣದ ಡಿವೈಡರ್ ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಸಮೀಪದ ಕುಂದವಾಡ ರಸ್ತೆ ಬಳಿ ನಡೆದಿದೆ.

      ಮುಂಜಾನೆ 4.30 ರ ಸಮಯದಲ್ಲಿ ಬೆಂಗಳೂರಿನಿಂದ ಉಕ್ಕಡಗಾತ್ರಿಗೆ ತೆರಳುತ್ತಿದ್ದ ದಂಪತಿಗಳ ಇನ್ನೋವಾ ಕಾರು ದಾವಣಗೆರೆ ಹೊರವಲಯದ ಹೊಸ ಕುಂದುವಾಡದ ಬಳಿ ರಸ್ತೆ ಪಕ್ಕವಿದ್ದ ಕಬ್ಬಿಣದ ಡಿವೈಡರ್​ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ದಂಪತಿಗಳಿಬ್ಬರು ಅಸುನೀಗಿದ್ದಾರೆ.

      ದಂಪತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನು ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

      ಈ ಸಂಬಂಧ ದಾವಣಗೆರೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link