ವಿಮಾನದಲ್ಲಿ ತಾಂತ್ರಿಕ ದೋಷ : ರಾಹುಲ್ ದೆಹಲಿಗೆ ವಾಪಸ್!

ದೆಹಲಿ:

      ಪಾಟ್ನಾಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಗೆ ವಾಪಸಾಗಿದ್ದಾರೆ.

      ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿಮಾನದ ಎಂಜಿನ್ ನಲ್ಲಿ ದೋಷ ಕಂಡು ಬಂದದ್ದರಿಂದ ನಾವು ದೆಹಲಿಗೆ ಹಿಂದಿರುಗಬೇಕಾಯಿತು. ಈ ಕಾರಣದಿಂದಾಗಿ  ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ತಡವಾಗಿವೆ. ಅದಕ್ಕಾಗಿ ಕ್ಷಮೆಯಿರಲಿ ಎಂದಿದ್ದಾರೆ.

     ಕಾಂಗ್ರೆಸ್ ಅಧ್ಯಕ್ಷರು ಇಂದು ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ, ವಿಮಾನದ ಎಂಜಿನ್ ದೋಷದಿಂದಾಗಿ ರಾಹುಲ್ ದೆಹಲಿಗೆ ಹಿಂದಿರುಗಿದ್ದು, ಈ ಮೂರು ನಗರಗಳ ಕಾರ್ಯಕ್ರಮಗಳಲ್ಲಿ ವಿಳಂಬವಾಗಿದೆ.  

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ